ಉಡುಪಿ: ದಿನಾಂಕ:22-10-2023(ಹಾಯ್ ಉಡುಪಿ ನ್ಯೂಸ್) ನಗರದ ಬಸ್ ನಿಲ್ದಾಣದ ಬಳಿಯ ಲಾಡ್ಜ್ ಒಂದರ ರೂಮ್ ಬಾಯ್ ಗಳಿಗೆ ಅಪರಿಚಿತರ ಗುಂಪೊಂದು ಹಲ್ಲೆ ನಡೆಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉ.ಕ ಜಿಲ್ಲೆ,ಭಟ್ಕಳ ನಿವಾಸಿ ರವಿಗೊಂಡ(20) ಎಂಬವರು ಉಡುಪಿ ಹಳೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಇರುವ ಸಂಭ್ರಮ್ ಲಾಡ್ಜ್ ನಲ್ಲಿ ರೂಮ್ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದಿನಾಂಕ 21/10/2023 ರಂದು 12:55 ಗಂಟೆಗೆ ರವಿಗೊಂಡರವರ ಜೊತೆ ಕೆಲಸ ಮಾಡಿಕೊಂಡಿರುವ ಯಾಸಿನ್ ರವರೊಂದಿಗೆ ಕೆಲಸ ಮುಗಿಸಿ ಹೊರಗೆ ಬರುತ್ತಿರುವಾಗ ಲಾಡ್ಜ್ ನ ಸ್ವಾಗತ ಕೊಠಡಿ ಬಳಿ 5 ಜನ ಆಪರಿಚಿತರು ಗಲಾಟೆ ಮಾಡುವ ಉದ್ದೇಶದಿಂದ ರವಿಗೊಂಡ ಮತ್ತು ಯಾಸಿನ್ ನನ್ನು ಅಡ್ಡಗಟ್ಟಿ, ಇನ್ನು ಮುಂದೆ ಇಲ್ಲಿ ಕೂತರೆ ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲʼ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದು, ಅಪರಿಚಿತರಲ್ಲಿ ಒಬ್ಬನು ರವಿಗೊಂಡರಿಗೆ ಮತ್ತು ಯಾಸಿನ್ ನಿಗೆ ಕೈಯಿಂದ ಹಲ್ಲೆ ಮಾಡಿರುತ್ತಾನೆ ಎಂದು ರವಿಗೊಂಡರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 341, 323, 504, 506 RW 149 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.