ಕಾರ್ಕಳ: ದಿನಾಂಕ:20:10:2023(ಹಾಯ್ ಉಡುಪಿ ನ್ಯೂಸ್) ಬೈಲೂರಿನ ಪರಶುರಾಮ ಥೀಮ್ ಪಾರ್ಕ್ ನ ಫೋಟೋ ತೆಗೆಯಲು ತೆರಳಿದ್ದ ಯುವಕನಿಗೆ ಯುವಕರ ಗುಂಪೊಂದು ಬೈದು ಮೊಬೈಲ್ ಕಸಿದು ಕೊಂಡಿದೆ ಎಂದು ನೊಂದ ಯುವಕ ಪೊಲೀಸರಿಗೆ ದೂರು ನೀಡಿದ್ದಾನೆ.
ಕಾರ್ಕಳ ನಿವಾಸಿ ಅಲ್ಬಜ್ (26) ಎಂಬವರು ದಿನಾಂಕ 19/10/2023 ರಂದು ಸಂಜೆ ಬೈಲೂರಿನ ಪರಶುರಾಮ ಥೀಮ್ ಪಾರ್ಕಿಗೆ ಫೋಟೋ ತೆಗೆಯಲು ತೆರಳಿದ ಸಮಯದಲ್ಲಿ ಅಲ್ಲಿಯೇ ಇದ್ದ ಆಪಾದಿತರಾದ ವಿಖ್ಯಾತ್ ,ಸುಹಾಸ್, ರಾಕೇಶ್ , ರಂಜಿತ್ , ಮುಸ್ತಾಫ ಮೊದಲಾದವರು ಸೇರಿಕೊಂಡು ಅಲ್ಬಜ್‌ರನ್ನು ಎಳೆದುಕೊಂಡು ಹೋಗಿ ಅವಾಚ್ಯ ಶಬ್ದಗಳಿಂದ ಬೈದು ಮೊಬೈಲನ್ನು ಎಳೆದುಕೊಂಡು ತೊಂದರೆ ನೀಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಅಲ್ಬಜ್ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 143, 147, 341, 504 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.