ಉಡುಪಿ: ದಿನಾಂಕ : 18-10-2023( ಹಾಯ್ ಉಡುಪಿ ನ್ಯೂಸ್). ಕಾಪು ತಾಲೂಕು ಬೊಮ್ಮರಬೆಟ್ಟು ಗ್ರಾಮದ ಹಿರಿಯಡ್ಕ – ಪಡ್ಡಂ ನಿವಾಸಿ ಪೆರ್ಡೂರು ರಾಜೇಂದ್ರ ರಾವ್ (67) ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಅಕ್ಟೋಬರ್ 17 (ಮಂಗಳವಾರ)ರಂದು ನಿಧನರಾದರು.
ಮಂಗಳೂರು ವೆನ್ ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮತ್ತು ಉಡುಪಿ ಜಿಲ್ಲೆ ಹಿರಿಯಡ್ಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೇತ್ರ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಇವರು ಪತ್ನಿ , ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ನಿವೃತ್ತ ಸ್ಟಾಫ್ ನರ್ಸ್ ಸುಶೀಲಾ ಆರ್. ರಾವ್ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.