Spread the love

ಶಿರ್ವ: ದಿನಾಂಕ: 16-10-2023(ಹಾಯ್ ಉಡುಪಿ ನ್ಯೂಸ್) ಪಿಲಾರು ಗ್ರಾಮದ ಮನೆಯೊಂದರ ಕಿಟಕಿ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಎಂಟು ಲಕ್ಷ ಮೌಲ್ಯದ ಚಿನ್ನಾಭರಣ ಕದ್ದ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದಿನಾಂಕ 15.10.2023  ರಂದು  ರಾತ್ರಿ ಕಾಪು ತಾಲೂಕು  ಪಿಲಾರು ಗ್ರಾಮದಲ್ಲಿರುವ  ಅರುಣ್‌ ವಿಜಯ್‌ ಎಂಬವರ  ಹಳೆಯ   ಹಂಚಿನ ಮನೆಯ  ಅಡುಗೆ  ಕೋಣೆಯ ಮರದ  ಕಿಟಕಿಯ ಪಟ್ಟಿಯನ್ನು  ಯಾರೋ  ಕಳ್ಳರು ಕಿತ್ತು ತೆಗೆದು  ಅದರ  ಮೂಲಕ ಮನೆಯ ಒಳಪ್ರವೇಶಿಸಿ  ಗೋದ್ರೆಜ್‌ ಅಲ್ಮೇರಾದ  ಬೀಗ  ತೆರೆದು  ಅದರ ಸೇಫ್‌ ಲಾಕರ್‌ನಲ್ಲಿದ್ದ  ಅಂದಾಜು ಮೌಲ್ಯ 8,00,500/-  ರೂ. ಬೆಲೆಯ ವಿವಿಧ ರೀತಿಯ ಒಟ್ಟು  179.4 ಗ್ರಾಂ   ತೂಕದ ಚಿನ್ನಾಭರಣಗಳನ್ನು ಕಳವು  ಮಾಡಿಕೊಂಡು  ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆಯಲ್ಲಿ. ಕಲಂ 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!