Spread the love

ಬೆಳಗಾವಿ:: ದಿನಾಂಕ: 10-10-2023(ಹಾಯ್ ಉಡುಪಿ ನ್ಯೂಸ್)

ದಿ ಹಿಂದೂ ಪತ್ರಿಕೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಕೇರಳದ ಜಿ.ಪ್ರಭಾಕರನ್ ಅವರು ಮೊನ್ನೆ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ.

ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ನ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಪ್ರಭಾಕರನ್ ರವರು ದೇಶದ ಪತ್ರಿಕಾ ಸಮೂಹದ ಹಿತಕ್ಕಾಗಿ ಸಲ್ಲಿಸಿದ ಸೇವೆ ಸ್ಮರಣೀಯ.

ಅವರ ನಿಧನದಿಂದ ದೇಶದ ಪತ್ರಿಕಾ ಸಮೂಹಕ್ಕೆ ವಿಶೇಷ ವಾಗಿ ಯೂನಿಯನ್ ಚಟುವಟಿಕೆಗಳಿಗೆ ತುಂಬಲಾರದ ನಷ್ಟವಾಗಿದೆ. ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ಮತ್ತು ಕರ್ನಾಟಕ ಪತ್ರಕರ್ತರ ಸಂಘ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.

ಪ್ರಭಾಕರನ್ ಅವರ ನಿಧನದಿಂದಾದ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬದವರಿಗೆ ಮತ್ತು ಅವರ ಪರಿವಾರದವರಿಗೆ ನೀಡಲಿ, ಪ್ರಭಾಕರನ್ ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಇಂಡಿಯನ್ ಜರ್ನಲಿಸ್ಟ್ ಯೂನಿಯನ್ ನ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಮುರುಗೇಶ ಶಿವಪೂಜಿ ಪ್ರಾರ್ಥಿಸಿದ್ದಾರೆ.

error: No Copying!