- ಮಣಿಪಾಲ: ದಿನಾಂಕ: 05-10-2023 (ಹಾಯ್ ಉಡುಪಿ ನ್ಯೂಸ್) ಮಣಿಪಾಲದ ಎಂಐಟಿ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ಇಬ್ಬರು ಯುವಕರನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
- ಮಣಿಪಾಲ ಪೊಲೀಸ್ ಠಾಣೆಯ ಪೊಲೀಸರು ದಿನಾಂಕ:29-09-2023 ರಂದು ಮಣಿಪಾಲದ ಎಂಐಟಿ ಪಾರ್ಕಿಂಗ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ನಿತೀಶ್ ಕುಮಾರ್ (19) ಮತ್ತು ಎಮ್.ತೇಜಸ್ (20) ಎಂಬಿಬ್ಬರನ್ನು ಮಾದಕವಸ್ತು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ ಬಂಧಿಸಿದ್ದು ಇವರೀರ್ವರು ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿರುತ್ತಾರೆ ಎನ್ನಲಾಗಿದೆ.
- ನಿತೀಶ್ ಕುಮಾರ್ ಹಾಗೂ ಎಮ್.ತೇಜಸ್ ಇವರೀರ್ವರು ಗಾಂಜಾ ಸೇವಿಸಿರುವ ಬಗ್ಗೆ ವೈದ್ಯಾಧಿಕಾರಿಗಳು ದಿನಾಂಕ 04/10/2023 ರಂದು ದೃಢಪತ್ರವನ್ನು ನೀಡಿರುತ್ತಾರೆ ಎನ್ನಲಾಗಿದೆ.
- ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿದೆ.