Spread the love
  • ಮಣಿಪಾಲ: ದಿನಾಂಕ: 29/09/2023 (ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ Ecstasy ಬಾರ್ ನಲ್ಲಿ ಪರವಾನಿಗೆ ಇಲ್ಲದೆ ಸಂಗೀತ ನುಡಿಸಿ ಡ್ಯಾನ್ಸ್ ಆಯೋಜಿಸಿದ್ದ ಬಾರ್ ಮಾಲೀಕನ ಮೇಲೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  • ಶಿವಳ್ಳಿ ಗ್ರಾಮದ  Ecstasy ಬಾರ್‌ & ರೆಸ್ಟೋರೆಂಟ್‌ ನಲ್ಲಿ ದಿನಾಂಕ : 25-09-2023 ರಂದು ಸಂಜೆ 5:00 ಗಂಟೆಯಿಂದ ರಾತ್ರಿ 10:30  ಗಂಟೆಯವರೆಗೆ ಕೆಲವು ವಿದ್ಯಾರ್ಥಿಗಳು ಪಾರ್ಟಿ ಆಯೋಜನೆ ಮಾಡಿ ಮನೋರಂಜನಾ ಕಾರ್ಯಕ್ರಮ ನಡೆಸಿ, ಸಂಗೀತ ನುಡಿಸಿರುವುದು ಮತ್ತು ಈ ಮನೋರಂಜನಾ ಪಾರ್ಟಿಯಲ್ಲಿ ವಿದ್ಯಾರ್ಥಿಗಳ ಪ್ಯಾಶನ್‌ ಶೋ, ಬಲೂನ್‌ ಪ್ರೀಜ್‌ ಪೋಪ್‌, ಡ್ಯಾನ್ಸ್‌ ಪ್ರೀಜ್‌ ಎಂಬ ಆಟವನ್ನು ಆಯೋಜಿಸಿ ನೃತ್ಯ ನಡೆಸಿದ್ದರು ಎನ್ನಲಾಗಿದೆ.
  • Ecstasy ಬಾರ್‌ & ರೆಸ್ಟೋರೆಂಟ್‌ನಲ್ಲಿ  ಯಾವುದೇ ಪರವಾನಿಗೆ ಇಲ್ಲದೇ ಮನೋರಂಜನಾ ಕಾರ್ಯಕ್ರಮ ಆಯೋಜಿಸಿ, ಸಂಗೀತ ನುಡಿಸಿ, ನೃತ್ಯಕ್ಕೆ ಅವಕಾಶ ಮಾಡಿಕೊಟ್ಟ Ecstasy ಬಾರ್‌ & ರೆಸ್ಟೋರೆಂಟ್‌ನ ಸೂಪರ್‌ವೈಸರ್‌ ಸುಕೇಶ್‌ ಮತ್ತು ಬಾರ್‌ನ ಮಾಲೀಕರಾದ ದಿನೇಶ್‌ ರವರು ಅಪರಾಧ ಎಸಗಿರುತ್ತಾರೆ ಎಂದು ದೂರಲಾಗಿದೆ.
  • ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಲಂ: 103(B)(i), 104  ಕೆ.ಪಿ. ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: No Copying!