Spread the love

  • ಮಣಿಪಾಲ: ದಿನಾಂಕ: 28.09.2023 (ಹಾಯ್ ಉಡುಪಿ ನ್ಯೂಸ್) ಮಣಿಪಾಲ ಎಂ ಐ ಟಿ ಜಂಕ್ಷನ್ ಬಳಿ ತಡ ರಾತ್ರಿ ಗಾಂಜಾ ಅಮಲಿನಲ್ಲಿದ್ದ ವಿದ್ಯಾರ್ಥಿನಿಯೋರ್ವಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
  • ಮಣಿಪಾಲ ಪೊಲೀಸ್ ಠಾಣಾ ಪೊಲೀಸ್‌ ಉಪ ನಿರೀಕ್ಷಕರು ಠಾಣೆಯ ಸಿಬ್ಬಂದಿಯವರೊಂದಿಗೆ ದಿನಾಂಕ :24-09-2023ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮುಂಜಾನೆ 2-30 ಘಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ ಎಂ ಐ ಟಿ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಪ್ರಿಶಾ (21) ವೈಟ್ ಫೀಲ್ಡ್, ಬೆಂಗಳೂರು ನಿವಾಸಿ ಎಂಬವಳು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ ಆಕೆಯನ್ನು ವಿಚಾರಣೆ ನಡೆಸಿ ಆಕೆಗೆ ದಿನಾಂಕ: 25.09.2023 ರಂದು ಠಾಣೆಗೆ ಬರುವಂತೆ ತಿಳಿಸಿದ್ದು, ಅದರಂತೆ ದಿನಾಂಕ: 25.09.2023 ರಂದು ಠಾಣೆಗೆ ಹಾಜರಾದವಳನ್ನು ವಶಕ್ಕೆ ಪಡೆದು, ಅದೇ ದಿನ ಆ ವಿದ್ಯಾರ್ಥಿನಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಠಾಣೆಯ ಮಹಿಳಾ ಪಿಸಿ ಶುಭ ರವರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ಆರೋಪಿ ಪ್ರಿಶಾ (21) ರವರು ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ: 27.09.2023 ರಂದು ದೃಢಪತ್ರವನ್ನು ನೀಡಿರುತ್ತಾರೆ ಎನ್ನಲಾಗಿದೆ .
  • ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿದೆ.

error: No Copying!