Spread the love

ಕಾಫು: ದಿನಾಂಕ : 27/09/2023 (ಹಾಯ್ ಉಡುಪಿ ನ್ಯೂಸ್) ಉದ್ಯಾವರ ಗ್ರಾಮದ ಸಂಪಿಗೆ ನಗರ ಕ್ರಾಸ್ ಬಳಿ ಗಾಂಜಾ ಸೇವನೆ ಮಾಡಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಕಾಪು ಪೊಲೀಸ್‌ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಯವರು ಠಾಣಾ ವ್ಯಾಪ್ತಿಯಲ್ಲಿ ದಿನಾಂಕ: 25-09-2023 ರಂದು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಉದ್ಯಾವರ ಗ್ರಾಮದ ಸಂಪಿಗೆ ನಗರ ಕ್ರಾಸ್‌ ಬಳಿ ಅನುಮಾನಾಸ್ಪದವಾಗಿ ಓರ್ವ ವ್ಯಕ್ತಿ ಕಂಡು ಬಂದಿದ್ದು, ಆತನನ್ನು ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತ ಮಾದಕ ಸೇವನೆಯ ನಶೆಯಲ್ಲಿರುವ ಬಗ್ಗೆ ಅನುಮಾನಗೊಂಡು ಪೊಲೀಸ್ ಸಿಬ್ಬಂದಿಗಳು ಠಾಣಾ ಪಿ.ಎಸ್.ಐ  ರವರ ಆದೇಶದಂತೆ ಆತನನ್ನು ಸ್ಥಳದಲ್ಲಿಯೇ ಬಂಧಿಸಿ ವಶಕ್ಕೆ ಪಡೆದುಕೊಂಡು ಆತನ ಹೆಸರು, ವಿಳಾಸ ವಿಚಾರಣೆ ನಡೆಸಿದಾಗ ಆತನ ಹೆಸರು ಮಹಮ್ಮದ್  ಅನಸ್ ಸಾಹೇಬ (25)  ಉಡುಪಿ ಎಂದು ತಿಳಿಸಿದ್ದು, ಬಳಿಕ ಪೊಲೀಸರು ಆತನನ್ನು ಕಾಪು ಠಾಣೆಗೆ ಕರೆತಂದು ವೈಧ್ಯಕೀಯ ಪರೀಕ್ಷೆಗೆ ಓಳಪಡಿಸುವ ಬಗ್ಗೆ ಆತನನ್ನು  ಪ್ರೊಫೆಸರ್ ಅಂಡ್ ಹೆಡ್ ಪೊರೆನ್ಸಿಕ್ ವಿಭಾಗ, ಕೆಎಂಸಿ ಮಣಿಪಾಲ ರವರ ಮುಂದೆ ಹಾಜರುಪಡಿಸಿದ್ದು, ಪರೀಕ್ಷಿಸಿದ ವೈಧ್ಯರು ಮಹಮ್ಮದ್ ಅನಸ್ ಸಾಹೇಬ ಈತನು ಗಾಂಜಾ ಸೇವಿಸಿರುವ ಬಗ್ಗೆ ದಿನಾಂಕ 26/09/2023 ರಂದು ದೃಢಪತ್ರ ನೀಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಕಾಫು ಪೊಲೀಸ್‌ ಠಾಣೆಯಲ್ಲಿ ಕಲಂ 27 (b) NDPS Act ರಂತೆ ಪ್ರಕರಣ ದಾಖಲಾಗಿದೆ.

error: No Copying!