ಉಡುಪಿ: ದಿನಾಂಕ: 26-09-2023(ಹಾಯ್ ಉಡುಪಿ ನ್ಯೂಸ್) ಕ್ರೆಡಿಟ್ ಕಾರ್ಡ್ ಆಕ್ಟಿವೇಶನ್ ಮಾಡಿ ಕೊಡುವುದಾಗಿ ನಂಬಿಸಿ ಮಣಿಪಾಲದ ವ್ಯಕ್ತಿ ಯೋರ್ವರಿಗೆ ಐದು ಲಕ್ಷ ರೂಪಾಯಿ ವಂಚನೆ ನಡೆಸಿರುವ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ಕರೀಮ್ ಎಂಬವರಿಗೆ ದಿನಾಂಕ:25-09-2023 ರಂದು ಯಾರೋ ಅಪರಿಚಿತ ವ್ಯಕ್ತಿಯೋರ್ವ ಮೊಬೈಲ್ ನಂಬ್ರ: 7908239043 ದಿಂದ ಕರೆ ಮಾಡಿ ತಾನು ಎಸ್.ಬಿ.ಐ ಕ್ರೆಡಿಟ್ ಕಾರ್ಡನ್ನು ಆಕ್ಟೀವೇಶನ್ ಮಾಡುವುದಾಗಿ ಹೇಳಿದ್ದು, ಆಗ ಅಬ್ದುಲ್ ಕರೀಮ್ ರವರು ಆಕ್ಟಿವೇಶನ್ ಆಗಿರುವುದಾಗಿ ತಿಳಿಸಿದ ನಂತರ ಆ ಅಪರಿಚಿತ ವ್ಯಕ್ತಿ ಮಣಿಪಾಲ ಶಾಖೆಗೆ ಸಂಬಂಧಿಸಿದ ಡೆಬಿಟ್ ಕಾರ್ಡ್ ಮಾಹಿತಿ ಹಾಗೂ ಓಟಿಪಿ ಪಡೆದು ಅಬ್ದುಲ್ ಕರೀಮ್ ರ ಎಸ್.ಬಿ ಖಾತೆ ಯಿಂದ ರೂ. 49,999/- ರಂತೆ ಕ್ರಮಾವಾಗಿ 10 ಸಲ ಟ್ರಾನ್ಸಾಕ್ಷನ್ ಮಾಡಿ ಒಟ್ಟು ರೂ. 4,99,990/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡು, ಮೋಸದಿಂದ ನಷ್ಟ ಉಂಟು ಮಾಡಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಕಲಂ: 66(D), ಐ.ಟಿ. ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ.