
ಹಿರಿಯಡ್ಕ: ದಿನಾಂಕ: 25-09-2023(ಹಾಯ್ ಉಡುಪಿ ನ್ಯೂಸ್) ಬೆಳ್ಳಂಪಳ್ಳಿ ಕಡೆಯಿಂದ ಕುಕ್ಕೆ ಹಳ್ಳಿ ಚೆಕ್ ಪೋಸ್ಟ್ ಕಡೆಗೆ ಮರುಳು ಕಳ್ಳ ಸಾಗಾಣಿಕೆ ನಡೆಸುತ್ತಿದ್ದ ಟಿಪ್ಪರನ್ನು ವಶಪಡಿಸಿಕೊಂಡು ಅದರ ಚಾಲಕ ಉಪೇಂದ್ರ ಎಂಬವನನ್ನು ಹಿರಿಯಡ್ಕ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಮಂಜುನಾಥ ಮರಬದ ಅವರು ಬಂಧಿಸಿದ್ದಾರೆ
ಹಿರಿಯಡ್ಕ ಪೊಲೀಸ್ ಠಾಣೆ ಪಿಎಸ್ಐ ಯವರಾದ ಮಂಜುನಾಥ ಮರಬದ ಅವರು ದಿನಾಂಕ 24-09-2023 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿ ಉಡುಪಿ ತಾಲೂಕು ಕುಕ್ಕೆಹಳ್ಳಿ ಚೆಕ್ ಪೋಸ್ಟ್ ತಲುಪಿ ಠಾಣಾ ಚೆಕ್ ಪೋಸ್ಟ್ ಕರ್ತವ್ಯದ ಸಿಬ್ಬಂದಿಗಳಾದ ಸೋಮಪ್ಪ ಹಾಗೂ ಮಾರುತಿರವರೊಂದಿಗೆ ವಾಹನ ತಪಾಸಣೆ ಮಾಡುವ ಸಮಯ ದಿನಾಂಕ: 25/09/2023 ರಂದು ಸಮಯ ಬೆಳಗ್ಗಿನ ಜಾವ 12:10 ಗಂಟೆಗೆ ಬೆಳ್ಳಂಪಳ್ಳಿ ಕಡೆಯಿಂದ ಒಂದು 407 ಟಿಪ್ಪರ್ ಬಂದಿದ್ದು ಆ ಟಿಪ್ಪರನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ, ಟಿಪ್ಪರ್ ನೊಂದಣಿ ನಂಬ್ರ KA19 D 9425 ಆಗಿದ್ದು ಆ ಟಿಪ್ಪರ್ ನಲ್ಲಿ ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೇ ಯಾವುದೇ ರಾಜಧನ ಪಾವತಿಸದೇ ಮರಳು ಸಾಗಿಸುತ್ತಿದ್ದು ಕಂಡು ಬಂದಿದ್ದು ಆ ಟಿಪ್ಪರ್ ಚಾಲಕನ ಹೆಸರು ಮತ್ತು ವಿಳಾಸವನ್ನು ಪೊಲೀಸರು ವಿಚಾರಿಸಿದಾಗ ಆತನ ಹೆಸರು ಉಪೇಂದ್ರ ಎಂದು ತಿಳಿಸಿದ್ದು ಈತನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮ ಲಾಭಗಳಿಸುವ ಉದ್ದೇಶದಿಂದ ಯಾವುದೇ ರಾಜಧನ ಪಾವತಿಸದೇ ಎಲ್ಲಿಂದಲೋ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಹೋಗುತ್ತಿದ್ದನೆಂದು ವಿಚಾರಣೆಯಲ್ಲಿ ತಿಳಿಸಿದ್ದಾನೆನ್ನಲಾಗಿದೆ.
ಆರೋಪಿ ಉಪೇಂದ್ರನ ವಶದಿಂದ ಒಟ್ಟು 6,000 ರೂ ಮೌಲ್ಯದ ಮರಳನ್ನು ಹಾಗೂ KA19 D 9425 ಟೆಂಪೋವನ್ನು ಪೊಲೀಸರು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.