ಬೈಂದೂರು: ದಿನಾಂಕ 23/09/2023 (ಹಾಯ್ ಉಡುಪಿ ನ್ಯೂಸ್) ಯಡ್ತರೆ ಗ್ರಾಮದ ಹೊಸೂರು ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಲ್ಲಿಗೆ ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಗೌಡ ಅವರು ದಾಳಿ ನಡೆಸಿ ಅಕ್ರಮ ಮದ್ಯವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಗೌಡ ಅವರಿಗೆ ದಿನಾಂಕ 22-09-2023ರಂದು ಯಡ್ತರೆ ಗ್ರಾಮದ ಹೊಸೂರು ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕ ರಿಂದ ಬಂದ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿದಾಗ ಅಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಸುರೇಶ ಎಂಬಾತ ಓಡಿ ಹೋಗಿದ್ದು, ಸ್ಥಳದಲ್ಲಿ ಪೊಲೀಸರು ಪರಿಶೀಲಿಸಿದಾಗ ಅಲ್ಲಿ ಇದ್ದ ಒಟ್ಟು 2.610 ಲೀಟರ್ ಮ̧ದ್ಯ, ನಗದು 12,930/- ರೂಪಾಯಿ ಹಾಗೂ ಮೊಬೈಲ್ ಪೋನ್ – 2 ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ .
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 32,34 ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.