
- ಕೋಟ: ದಿನಾಂಕ 17/09/2023 (ಹಾಯ್ ಉಡುಪಿ ನ್ಯೂಸ್) ಸಾಸ್ತಾನ ಕೋಡಿ ರೋಡ್ ನ ಸುಷ್ಮಾ ಬಾರ್ ನ ಹಿಂಬದಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯನ್ನು ಕೋಟ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಶಂಭುಲಿಂಗಯ್ಯ ಎಮ್ ಇ ಅವರು ಬಂಧಿಸಿದ್ದಾರೆ.
- ಕೋಟ ಪೊಲೀಸ್ ಠಾಣೆ ಪಿಎಸ್ಐ ಯವರಾದ ಶಂಭುಲಿಂಗಯ್ಯ ಎಮ್ ಇ ಅವರು ದಿನಾಂಕ:16-09-2023ರಂದು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಬ್ರಹ್ಮಾವರ ತಾಲೂಕು ಗುಂಡ್ಮಿ ಗ್ರಾಮದ ಸಾಸ್ತಾನ ಕೋಡಿ ರೋಡ್ ನ ಸುಷ್ಮಾ ಬಾರ್ ನ ಹಿಂಬದಿ ಇರುವ ಅಂಗಡಿ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೊರೆತ ಖಚಿತ ಮಾಹಿತಿಯ ಮೇರೆಗೆ ಕೂಡಲೇ ಧಾಳಿ ನಡೆಸಿ ಮಟ್ಕಾ ಜುಗಾರಿ ಆಟದಲ್ಲಿ ನಿರತನಾಗಿದ್ದ ಆರೋಪಿ ರಾಜೇಶ್ ಭಟ್ ಯಾನೆ ರಾಜರಾಮ್ ಭಟ್ ಎಂಬಾತನನ್ನು ಸುತ್ತುವರಿದು ಹಿಡಿದು ಬಂಧಿಸಿ ವಿಚಾರಿಸಿದಾಗ ಆತನ ಕೈಯಲ್ಲಿ ಮಟ್ಕಾ ಚೀಟಿ ಮತ್ತು ಬಾಲ್‌ಪೆನ್‌ಇದ್ದು ಅವುಗಳಲ್ಲಿ ಸಂಖ್ಯೆಗಳನ್ನು ಬರೆದಿದ್ದು ತನ್ನ ಸ್ವಂತ ಲಾಭಕ್ಕಾಗಿ ಸಂಖ್ಯೆಗಳ ಮೇಲೆ ಹಣವನ್ನು ಸಾರ್ವಜನಿಕರಿಂದ ಪಡೆದು ಮಟ್ಕಾ ಜುಗಾರಿ ಆಟ ಆಡಿಸುತ್ತಿದ್ದಿರುವುದಾಗಿ ಹಾಗೂ ಮಟ್ಕಾ ಜೂಜಾಟದಿಂದ ಸಂಗ್ರಹಿಸಿದ ಹಣವನ್ನು ಸಂಜೀವ ಪೂಜಾರಿ, ವಂಡ್ಸೆ ರವರಿಗೆ ನೀಡುವುದಾಗಿ ತಿಳಿಸಿರುತ್ತಾನೆ ಎನ್ನಲಾಗಿದೆ.
- ಆರೋಪಿ ರಾಜೇಶ್ ಭಟ್ ನನ್ನು ಹಾಗೂ ಆತನ ಶರ್ಟ್‌ಕಿಸೆಯಲ್ಲಿದ್ದ ಮಟ್ಕಾ ಜುಗಾರಿ ಆಟಕ್ಕೆ ಬಳಸಿದ ಮಟ್ಕಾ ಚೀಟಿ, ಬಾಲ್‌ಪೆನ್‌ಮತ್ತು ನಗದು ಒಟ್ಟು ಮೌಲ್ಯ 6,560/- ರೂಪಾಯಿ ಹಣವನ್ನು ಸ್ವಾಧಿನಪಡಿಸಿಕೊಂಡಿರುತ್ತಾರೆ
- . ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ: 78(1)(3) KP ACTಯಂತೆ ಪ್ರಕರಣ ದಾಖಲಾಗಿದೆ.