Spread the love

  • ಕಾರ್ಕಳ:  ದಿನಾಂಕ:03-08-2023(ಹಾಯ್ ಉಡುಪಿ ನ್ಯೂಸ್) ಕಸಬಾ ಗ್ರಾಮದ ಕಾವೆರಢ್ಕ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿಯವರು ಬಂಧಿಸಿದ್ದಾರೆ.
  • ಕಾರ್ಕಳ ನಗರ ಪೊಲೀಸ್‌ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಂದೀಪ್ ಕುಮಾರ್ ಶೆಟ್ಟಿಯವರು ದಿನಾಂಕ 01/09/2023 ರಂದು ಸಿಬ್ಬಂಧಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕಾರ್ಕಳ ತಾಲೂಕು ಕಸಬಾ ಗ್ರಾಮದ ಕಾವೆರಡ್ಕ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಒಟ್ಟು ಸೇರಿ ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳನ್ನು ಉಪಯೋಗಿಸಿ ಅಂದರ್‌ ಬಾಹರ್‌ ಎಂಬ ಅದೃಷ್ಟದ ಜುಗಾರಿ ಆಟ ಆಡುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಬಂದ ಖಚಿತ ಮಾಹಿತಿಯಂತೆ ಕೂಡಲೇ ಸ್ಥಳಕ್ಕೆ ಧಾಳಿ  ನಡೆಸಿದಾಗ  ತಮ್ಮ ಸ್ವಂತ ಲಾಭಕ್ಕಾಗಿ ಹಣವನ್ನು ಪಣವಾಗಿಟ್ಟು ಅಂದರ್  ಬಾಹರ್ ಎಂಬ ಜುಗಾರಿ ಆಟವನ್ನು ಆಡುತ್ತಿದ್ದ  1)ವಿಜಯ್ ಕುಮಾರ್ (38) ವಾಸ: ತೆಳ್ಳಾರ್ ಸೇತುವೆ ಬಳಿ ,ಕಾರ್ಕಳ ಕಸಬಾ ಗ್ರಾಮ 2) ಶಾಹಿದ್ ಪಿ.ಬಿ (38) ವಾಸ: ಸಲೀನಾ ಮಂಜಿಲ್ ಪುಲ್ಕೇರಿ, ಬೈಪಾಸ್, ಸಾಣೂರು  ಗ್ರಾಮ, ಕಾರ್ಕಳ 3) ಸೋಮನಾಥ  (30)   ವಾಸ: ಕುಂಬ್ರಪದವು, ತೆಳ್ಳಾರ್ ಗುಡ್ಡೆಯಂಗಡಿ, ಕಾರ್ಕಳ  ಕಸಬಾ  ಗ್ರಾಮ 4)ಸಂತೋಷ (38) ವಾಸ; ಮಾರ್ಕೆಟ್ ರಸ್ತೆ, ಕಾರ್ಕಳ ಕಸಬಾ ಗ್ರಾಮ, ಎಂಬವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು ನಂತರ ಅಪಾದಿತರು  ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ 7380/- ,  ಇಸ್ಪೀಟ್‌ಎಲೆಗಳು-52 ಹಾಗೂ ಹಳೆಯ ದಿನಪತ್ರಿಕೆ -1 ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
  • ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ 87 KP Actರಂತೆ ಪ್ರಕರಣ ದಾಖಲಾಗಿದೆ.
error: No Copying!