Spread the love

ಕೋಟ: ದಿನಾಂಕ:06-08-2023(ಹಾಯ್ ಉಡುಪಿ ನ್ಯೂಸ್) ಮೊಳಹಳ್ಳಿ ಗ್ರಾಮದ ಗುಡ್ಡೆ ಅಂಗಡಿ ಬಳಿ ದಾಳಿ ನಡೆಸಿ ಇಸ್ಪೀಟ್ ಜುಗಾರಿ ಆಡುತ್ತಿದ್ದ 24 ಮಂದಿಯನ್ನು ಕೋಟ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಶಂಭುಲಿಂಗಯ್ಯ.ಎಂ.ಇ ಅವರು ಬಂಧಿಸಿದ್ದಾರೆ.

ಕೋಟ ಪೊಲೀಸ್ ಠಾಣೆಯ ಪಿಎಸ್ಐ ಯವರಾದ ಶಂಭುಲಿಂಗಯ್ಯ .ಎಂ.ಇ ಅವರಿಗೆ ದಿನಾಂಕ: 05.08.2023 ರಂದು ಸಂಜೆ ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಗುಡ್ಡೆಯಂಗಡಿ ಕ್ರಾಸ್‌ ಬಳಿ ಇರುವ ವಿನಾಯಕ ಸಭಾಂಗಣದಲ್ಲಿ ಹಲವರು ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ಮಾಹಿತಿದಾರರೋರ್ವರಿಂದ ದೊರೆತ ಖಚಿತ ಮಾಹಿತಿಯಂತೆ ಕೂಡಲೇ ಇಲಾಖಾ ವಾಹನದಲ್ಲಿ ಠಾಣೆಯ ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ತೆರಳಿ ಇಸ್ಪೀಟು ಜುಗಾರಿ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ರಾತ್ರಿ ಧಾಳಿ ನಡೆಸುತ್ತಾರೆ.

ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ 1) ಅಬ್ದುಲ್‌ ಮುನೀರ್‌,2) ಸಲ್ಮಾನ್‌,3) ಬಸವರಾಜ,4) ವಿಷ್ಣು ಕೆ.ವಿ.,5) ದಿನೇಶ್‌,6) ಕೆ. ವಿನಾಯಕ7) ಸಂದೀಪ,8) ಕೃಷ್ಣ,9) ಸುಧಾಕರ,10) ನಾಗರಾಜ,11) ಸುಬ್ರಹ್ಮಣ್ಯ, 12) ಶ್ರೀಧರ13) ಇ. ಅ್ಯಂಟನಿ ಮಸ್ಕರೇನಸ್‌,14)ಶೃತಿರಾಜ್‌, 15) ರಘು,16) ಹುಸೇನ್‌,17) ಸಂದೇಶ್‌,18) ರಾಜು ಮೋಗೇರ,19) ಗೋಪಾಲ, 20) ಗಣೇಶ್‌,21) ಮಿಥುನ್‌ ,22) ಸುಧರ್ಮ,23) ಕಮಲಾಕ್ಷ ಹಾಗೂ24) ಸುಧಾಕರ ಇವರುಗಳನ್ನು ವಶಕ್ಕೆ ಪಡೆದು ಅವರ ಬಳಿ ಜುಗಾರಿ ಆಟಕ್ಕೆ ಬಳಸಿದ 1) ಇಸ್ಪೀಟು ಎಲೆಗಳು – 52, 2) ಸ್ಟೀಲ್‌ ಟೇಬಲ್‌ಗಳು – ಮೂರು, 3) ಪ್ಲಾಸ್ಟಿಕ್‌ ಕುರ್ಚಿಗಳು – 24, 4) ನೀಲಿ, ಹಸಿರು & ಹಳದಿ ಬಣ್ಣಗಳ ಟೇಬಲ್‌ ಕ್ಲಾತ್‌ – 1, 5) ಒಟ್ಟು ನಗದು ರೂ. 1,49,680/-, 6) ಬಿಳಿ ಬಣ್ಣದ ನಂ. KA 01 AG 8517 TOYOTA ETIOS ಒಂದು ಕಾರು, 7) ಸಿಲ್ವರ್‌ ಬಣ್ಣದ ನಂ. KA 14 A 1604 ನೇ ಓಮಿನಿ ಒಂದು ಕಾರು, 8) ಮೆರೂನ್‌ ಬಣ್ಣದ ನಂ. KA 22 P Ritz ಒಂದು ಕಾರು, 9) ಕೆಂಪು ಮತ್ತು ಕಪ್ಪು ಬಣ್ಣದ ನಂ. KA 20 EW 9519 ನೇ TVS Star City ಒಂದು ಮೋಟಾರ್‌ ಸೈಕಲ್‌, 10) ಕಪ್ಪು ಬಣ್ಣದ ನಂ. KA 20 EF 6040 ನೇ Fassion Pro ಒಂದು ಮೋಟಾರ್‌ ಸೈಕಲ್‌, 11) ಮೆರೂನ್‌ ಬಣ್ಣದ ನಂ. KA 20 ET 4955 ನೇ Suzuki Access ಒಂದು ಸ್ಕೂಟಿ, 12) ಗ್ರೇ ಬಣ್ಣದ ನಂ. KA 20 EQ 6072 ನೇ Honda Dio ಒಂದು ಸ್ಕೂಟಿ, ಒಟ್ಟು ರೂ. 8,27,580/- ಮೌಲ್ಯದ ಸ್ವತ್ತಗಳು ಹಾಗೂ ನಗದನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಕಲಂ: 79, 80 K.P. Act ರಂತೆ ಪ್ರಕರಣ ದಾಖಲಾಗಿದೆ.

error: No Copying!