ಶಂಕರನಾರಾಯಣ: ದಿನಾಂಕ:03-08-2023 (ಹಾಯ್ ಉಡುಪಿ ನ್ಯೂಸ್) ಹೆಂಗವಳ್ಳಿ ಕಡೆಯಿಂದ ಹೈಕಾಡಿ ಕಡೆಗೆ ಕದ್ದ ಜಾನುವಾರುಗಳನ್ನು ವಧೆ ಮಾಡಲು ಸಾಗಾಟ ಮಾಡುತ್ತಿದ್ದ ಮೂವರನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 02/08/2023 ರಂದು ಆರೋಪಿ ಗೋಪಾಲ ಪೂಜಾರಿ ಎಂಬವರು ಎಲ್ಲಿಯೋ ಕಳವು ಮಾಡಿ ನೀಡಿದ ಎರಡು ಗಂಡು ದನದ ಕರುಗಳನ್ನು ಆರೋಪಿಗಳಾದ ಬೋಜ ಪೂಜಾರಿ (35), ವಾಸ: ನೀರ್ಮಣ್ಣು ಹೈಕಾಡಿ , 76 ಹಾಲಾಡಿ ಗ್ರಾಮ ಬ್ರಹ್ಮಾವರ . ಶ್ರೀಮತಿ, ಸುಜಾತ ಪೂಜಾರಿ(38), ಗಂಡ:ರಾಜು ಪೂಜಾರಿ, ವಾಸ.ಶಾಲೆಯ ಬಳಿ ಹೈಕಾಡಿ ಹಿಲಿಯಾಣ ಗ್ರಾಮ ಬ್ರಹ್ಮಾವರ ಎಂಬವರು KA-20-D-5939 ನೇ ನಂಬ್ರದ ಪಿಕಪ್ ವಾಹನದೊಳಗೆ ಯಾವುದೇ ಪರವಾನಿಗೆ ಹೊಂದದೇ ಕರುಗಳಿಗೆ ಮೇವು ಬಾಯಾರಿಕೆ ನೀಡದೇ ಹಿಂಸಿಸುವ ರೀತಿಯಲ್ಲಿ ಹಿಂಸಾತ್ಮಕವಾಗಿ ತುಂಬಿಸಿ ವಧೆ ಮಾಡಲು ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹ್ಯೊಗೆ ಬೆಳಾರ್ ಹೆಂಗವಳ್ಳಿ ಪಂಚಾಯತ್ ಕ್ರಾಸ್ ಬಳಿ ಹೆಂಗವಳ್ಳಿ ಕಡೆಯಿಂದ ಹೈಕಾಡಿ ಕಡೆಗೆ ಸಾಗಾಟ ಮಾಡುತ್ತಿರುವಾಗ ಶಂಕರನಾರಾಯಣ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಶಂರನಾರಾಯಣ ಪೊಲೀಸ್ ಠಾಣೆಯಲ್ಲಿ ಕಲಂ: 379 ಐಪಿಸಿ ಮತ್ತು ಕಲಂ: 4,5,7,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧ್ಯಾದೇಶ 2020 ಮತ್ತು ಕಲಂ 11 (1) (ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆ 1966 ರಂತೆ ಪ್ರಕರಣ ದಾಖಲಾಗಿದೆ.