Spread the love

ಕಾರ್ಕಳ: ದಿನಾಂಕ: 21-07-2023(ಹಾಯ್ ಉಡುಪಿ ನ್ಯೂಸ್) ಕಾರ್ಕಳ ಬಂಡೀಮಠದಲ್ಲಿ ಬಸ್ ಪ್ರಯಾಣಿಕರೋರ್ವರಿಗೆ ಬಸ್ ಮಾಲೀಕ ಹಾಗೂ ಡ್ರೈವರ್ ಹಲ್ಲೆ ನಡೆಸಿದ್ದಾರೆ ಎಂದು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿರಿಯಡ್ಕ ಸರ್ಕಾರಿ ಕಾಲೇಜಿನ ಬಳಿಯ ನಿವಾಸಿ ಎಚ್ . ಅರುಣ್ ಕುಮಾರ್ (52) ಎಂಬವರು ಮೂಡಬಿದ್ರೆಯಲ್ಲಿ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 20/07/2023 ರಂದು ಹಿರಿಯಡ್ಕದಿಂದ ಹೆಚ್‌ಎಂಟಿ ಬಸ್ ನಲ್ಲಿ ಕಾರ್ಕಳಕ್ಕೆ ಬರುತ್ತಿರುವ ಸಮಯ ಜಾರ್ಕಳದಿಂದ ಎಸ್‌ವಿಟಿ ಎಂಬ ಬಸ್ಸೊಂದು ಅಡ್ಡಲಾಗಿ ಬರುತ್ತಾ ಹೆಚ್‌ಎಂಟಿ ಬಸ್‌ಗೆ ಅಡ್ಡ ಇಟ್ಟಿದ್ದು ಆಗ ಹೆಚ್‌ಎಂಟಿ ಬಸ್‌ನ ಪ್ರಯಾಣಿಕರು ಇಳಿದು ನಿಮ್ಮ ಬಸ್ಸಿನವರ ತಕರಾರು ಇದ್ದರೆ ಪೊಲೀಸ್ ರಿಗೆ ದೂರು ನೀಡಿ ಎಂದು ಹೇಳಿ ಬಸ್ಸು ಹತ್ತಿದ್ದು, ಪುನಃ ಬಂಡಿಮಠ ಬಸ್ ಸ್ಟಾಂಡ್ ಹತ್ತಿರ ಹೆಚ್‌ಎಂಟಿ ಬಸ್ಸಿಗೆ ಎಸ್‌ವಿಟಿ ಬಸ್ ಅಡ್ಡ ಇಟ್ಟು ಬಸ್ಸಿನ ಮಾಲಕ ಮತ್ತು ಡ್ರೈವರ್ ಹೆಚ್‌ಎಂಟಿ ಬಸ್ಸಿಗೆ ಹತ್ತಿ ಅರುಣ್ ಕುಮಾರ್ ರವರಿಗೆ ಮುಖ ಮತ್ತು ದೇಹಕ್ಕೆ ಕೈಯಿಂದ ಥಳಿಸಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಅರುಣ್ ಕುಮಾರ್ ರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಕಲಂ: 341, 323 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!