ಉಡುಪಿ: ದಿನಾಂಕ: 19/07/2023 (ಹಾಯ್ ಉಡುಪಿ ನ್ಯೂಸ್) ನಗರದ ಮೀನು ಮಾರುಕಟ್ಟೆ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತ್ತಿದ್ದ ವ್ಯಕ್ತಿ ಯನ್ನು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪುನೀತ್ ಕುಮಾರ್ B.E ರವರು ಬಂಧಿಸಿದ್ದಾರೆ.
ಉಡುಪಿ ನಗರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ಕಾ.ಸು) ಪುನೀತ್ ಕುಮಾರ್ ಬಿ.ಇ ಇವರು ದಿನಾಂಕ:18-07-2023ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಉಡುಪಿ ನಗರದ ಮೀನು ಮಾರ್ಕೇಟ್ ಬಳಿ ಸಿಟಿ ವೈನ್ಸ್ ಎದುರಿನ ರಸ್ತೆ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆಪಾದಿತ ರಮೇಶ ಶೆಟ್ಟಿಗಾರ ಎಂಬಾತನು ಮದ್ಯ ಸೇವಿಸುತ್ತಿರುವಾಗ ಆಪಾದಿತನನ್ನು ಬಂಧಿಸಿ ವಶಕ್ಕೆ ಪಡೆದು ಸ್ಥಳದಲ್ಲಿದ್ದ 500 ಎಂ.ಎಲ್. ನೀರಿನ ಬಾಟ್ಲಿ-1, ಗ್ಲಾಸ್-1, DSP Black Deluxe Whisky 180 ml ನ ಮದ್ಯದ ಬಾಟಲಿಗಳು-2, ಹಾಗೂ Kingfisher Premium Lager Beer 650 ML Bottle-1 ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 15(A) ಕರ್ನಾಟಕ ಅಬಕಾರಿ ಕಾಯ್ದೆ-1965 ರಂತೆ ಪ್ರಕರಣ ದಾಖಲಾಗಿದೆ.