Spread the love

ಮಣಿಪಾಲ: ದಿನಾಂಕ 18/07/2023 (ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ಶೀಂಬ್ರಾ ಬ್ರಿಜ್ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರನ್ನು ಮಣಿಪಾಲ ಪೊಲೀಸ್‌ ಠಾಣೆಯ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ ವಿ ರವರು ಬಂಧಿಸಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ ವಿ ಅವರಿಗೆ ದಿನಾಂಕ:17-07-2023ರಂದು  ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಶೀಂಬ್ರಾ ಬ್ರಿಡ್ಜ್ ಬಳಿ ಇಬ್ಬರು ವ್ಯಕ್ತಿಗಳು ನೀಲಿ ಬಣ್ಣದ ಕಾರಿನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಮಾದಕ ವಸ್ತುವಾದ ಗಾಂಜಾವನ್ನು ಹೊಂದಿರುತ್ತಾರೆ ಎಂದು ಬಂದ ಗುಪ್ತ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿ ಆರೋಪಿಗಳಾದ 1) ಮುಝಾಮಿಲ್‌  (27),  ವಾಸ:  ಕೋಟೆ   ರಸ್ತೆ  , ಕಾಪು  ಅಂಚೆ  ಮಲ್ಲಾರು  ಗ್ರಾಮ, ಕಾಪು  ತಾಲೂಕು, 2) ಮಹಮ್ಮದ್‌  ಪಾಝಿಲ್‌ (19),   ವಾಸ: ಅಹಮಾದಿ ಮೊಹಲ್ಲಾ   ಪಕೀರನಕಟ್ಟೆ  ಮಲ್ಲಾರು ಗ್ರಾಮ  ಕಾಪು   ತಾಲೂಕು, 3) ಶಿಯಾಬ್ ಮಾಣಿ ಮಂಗಳೂರು, 4) ಸಾಹಿಲ್  ಡಯಾನ ಟಾಕೀಸ್ ಬಳಿ ಉಡುಪಿ, 5) ರಿಜ್ವಾನ್ ಬೈಂದೂರು  ಎಂಬವರನ್ನು ಬಂಧಿಸಿ ಅವರ ಕಾರಿನಲ್ಲಿದ್ದ 250 ಗ್ರಾಂ ಗಾಂಜಾ ಅಂದಾಜು ಮೌಲ್ಯ 12,000/- ,  ಅಲ್ಲದೇ ಆಪಾದಿತರ ವಶದಲ್ಲಿದ್ದ  KA-03-AG-6656 ನೇ ಮಾರುತಿ ಕಂಪನಿಯ ಸ್ವಿಫ್ಟ್ ಕಾರು  ಮೌಲ್ಯ 4,00,000/- , OPPO ಕಂಪನಿಯ ಮೊಬೈಲ್ ಪೋನ್  ಮೌಲ್ಯ 5000/-  ಹಾಗೂ ನೋಕಿಯಾ ಕಂಪನಿಯ ಕೀಪ್ಯಾಡ್ ಮೊಬೈಲ್ ಪೋನ್  ಮೌಲ್ಯ ರೂಪಾಯಿ 200/-  ಇವುಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಗಾಂಜಾವನ್ನು ಮಂಗಳೂರಿನ ಮಾಣಿ ಬಳಿಯಿರುವ ಶಿಯಾಬ್ ಹಾಗೂ ಉಡುಪಿ ಡಯಾನ ಟಾಕೀಸ್ ಬಳಿಯಿರುವ ಸಾಹಿಲ್ ಮತ್ತು ಬೈಂದೂರಿನ ರಿಜ್ವಾನ್ ಇವರು ಆಪಾದಿತರಾದ ಮುಝಾಮಿಲ್ ಮತ್ತು ಮಹಮ್ಮದ್ ಫಾಝಿಲ್ ನವರಿಗೆ ನೀಡಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಕಲಂ:8(c) 20(b) (ii) (A)  NDPS ರಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!