Spread the love

ಬೈಂದೂರು: ದಿನಾಂಕ 16/07/2023(ಹಾಯ್ ಉಡುಪಿ ನ್ಯೂಸ್) ಬೈಂದೂರು ಪೊಲೀಸ್‌ ಠಾಣೆಯ ವ್ಯಾಪ್ತಿಯ ಯಡ್ತರೆ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಬೈಂದೂರು ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ ಗೌಡ ಬಿಎಸ್ ಅವರು ಬಂಧಿಸಿದ್ದಾರೆ.

ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ (ಕಾ ಮತ್ತು ಸು) ನಿರಂಜನ ಗೌಡ ಬಿ ಎಸ್ ಅವರು ದಿನಾಂಕ:14-07-2023ರಂದು ಠಾಣೆಯಲ್ಲಿರುವಾಗ ಯಡ್ತರೆ ಗ್ರಾಮದ  ಆಲಂದೂರು ಶಾಲೆಯ ಎದುರು ಸರ್ಕಾರಿ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಬಂದ ಸಾರ್ವಜನಿಕ ಮಾಹಿತಿ ಮೇರೆಗೆ  ಕೂಡಲೇ ಸ್ಥಳಕ್ಕೆ  ದಾಳಿ ನಡೆಸಿ ಇಸ್ಪೀಟು ಆಟವಾಡುತ್ತಿದ್ದ 1] ಮಣಿಕಂಠ ಪೂಜಾರಿ (31), ವಾಸ; ಮೇಲ್ಪಂಕ್ತಿ, ಶಿರೂರು ಗ್ರಾಮ, ಬೈಂದೂರು, 2] ಹರೀಶ್ ನಾಯ್ಕ (28), ವಾಸ: ಕಂಚಿಕೇರಿ, ಬೆಳ್ಕೆ ಗ್ರಾಮ, ಭಟ್ಕಳ ತಾಲೂಕು, 3]  ಕಿರಣ ಮೊಗವೀರ (19), ವಾಸ: ನೂಜ್, ಬೆಳ್ಕೆ ಗ್ರಾಮ , ಭಟ್ಕಳ, 4]  ದಿನೇಶ್ ನಾಯ್ಕ(36), ವಾಸ: ಗಂಜಿಗೇರಿ, ಬೆಳ್ಕೆ ಗ್ರಾಮ ಭಟ್ಕಳ ಇವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡು ಇಸ್ಪೀಟ್ ಜುಗಾರಿ  ಆಟಕ್ಕೆ ಬಳಸಿದ ಪ್ಲಾಸ್ಟಿಕ್ ಚೀಲ -1, ಇಸ್ಪಿಟ್‌ ಕಾರ್ಡ್-52, ಹಾಗೂ  7,500/- ರೂಪಾಯಿ ನಗದನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

error: No Copying!