
- ದಿನಾಂಕ: 12-07-2023(ಹಾಯ್ ಉಡುಪಿ ನ್ಯೂಸ್) ಗೋಳಿಯಂಗಡಿ ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯನ್ನು ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಅವರು ಬಂಧಿಸಿದ್ದಾರೆ.
- ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ರವರಿಗೆ ದಿನಾಂಕ 10-07-2023 ರಂದು ಬಂದ ಮಾಹಿತಿಯಂತೆ ಬೆಳ್ವೆ ಗ್ರಾಮದ ಗೋಳಿಯಂಗಡಿ ಹೆಂಗವಳ್ಳಿ ಕ್ರಾಸ್ ಬಳಿ ಇರುವ ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ಮಟ್ಕಾ ಜುಗಾರಿ ಆಟದ ಬಗ್ಗೆ ಓರ್ವ ವ್ಯಕ್ತಿ ಹಣ ಸಂಗ್ರಹ ಮಾಡುತ್ತಿರುವುದಾಗಿ ಮಾಹಿತಿ ಬಂದಿದ್ದು,ಆ ಕೂಡಲೇ ನಾಸೀರ್ ಹುಸೇನ್ , ಪೊಲೀಸ್ ಉಪನಿರೀಕ್ಷಕರು, ಶಂಕರನಾರಾಯಣ ಪೊಲೀಸ್ ಠಾಣೆ ಅವರು ಮಾಹಿತಿಯಂತೆ ಆ ಸ್ಥಳಕ್ಕೆ ದಾಳಿ ನಡೆಸಿದಾಗ ಅಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಆರೋಪಿ ನಿರಂಜನ್ (30) ವಾಸ: ಪಡುಮುಂಡು,ಸ್ಯಾಬರಕಟ್ಟೆ,ಶಿರಿಯಾರ ಎಂಬವನನ್ನು ಬಂಧಿಸಿ ಆತನಿಂದ ಮಟ್ಕಾ ಸಂಖ್ಯೆ ಬರೆದ ಚೀಟಿ-1, ಬಾಲ್ ಪೆನ್ನು -1 ಹಾಗೂ ಮಟ್ಕಾ ಜುಗಾರಿ ಆಟದ ಬಗ್ಗೆ ಸಂಗ್ರಹ ಮಾಡಿದ ನಗದು ಹಣ ರೂಪಾಯಿ 1040/- ವಶಪಡಿಸಿಕೊಂಡಿರುತ್ತಾರೆ.
- ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 77/2023 ಕಲಂ: 78(I),(III) ಕರ್ನಾಟಕ ಪೊಲೀಸ್ ಕಾಯ್ದೆ (ತಿದ್ದುಪಡಿ) 2021 ರಂತೆ ಪ್ರಕರಣ ದಾಖಲಾಗಿದೆ.