- ಶಿರ್ವ: ದಿನಾಂಕ:10-07-2023 (ಹಾಯ್ ಉಡುಪಿ ನ್ಯೂಸ್) ಬಂಟಕಲ್ಲು ಆಟೋ ನಿಲ್ದಾಣದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ವ್ಯಕ್ತಿಯನ್ನು ಶಿರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.
- ಶಿರ್ವ ಗ್ರಾಮದ ಬಂಟಕಲ್ಲು ಅಟೋ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ ಹೇಳಿ ಮಟ್ಕಾ ಜುಗಾರಿ ಆಟದ ಬಗ್ಗೆ ಆಲ್ವಿನ್ ಸುನೀಲ್ ಸಲ್ದಾನ ಎಂಬವನು ಹಣ ಸಂಗ್ರಹ ಮಾಡುತ್ತಿರುವುದಾಗಿ ಶಿರ್ವ ಪೊಲೀಸ್ ಠಾಣೆಯ ಸಿಹೆಚ್ ಸಿ ಶಿವರಾಮ ನಾಯ್ಕ ರವರಿಗೆ ದಿನಾಂಕ: 10-07-2023 ರಂದು ಪೊಲೀಸ್ ಬಾತ್ಮಿದಾರರೋರ್ವರಿಂದ ಬಂದ ಮಾಹಿತಿಯಂತೆ ಈ ಮಾಹಿತಿಯನ್ನು ಠಾಣಾಧಿಕಾರಿ ಶಿರ್ವ ಪೊಲೀಸ್ ಠಾಣೆಯವರಿಗೆ ತಿಳಿಸಿ ಅವರ ಸೂಚನೆಯಂತೆ ಶಿವರಾಮ ನಾಯ್ಕ್, ಸಿಹೆಚ್‌ಸಿ ಶಿರ್ವ ಪೊಲೀಸ್ ಠಾಣೆ ಇವರು ಕಾಪು ತಾಲೂಕಿನ ಶಿರ್ವ ಗ್ರಾಮದ ಬಂಟಕಲ್ಲು ಅಟೋ ನಿಲ್ದಾಣದ ಬಳಿ ತಲುಪಿದಾಗ ಅಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಆಲ್ವಿನ್ ಸುನೀಲ್ ಸಲ್ಡಾನ ಎಂಬಾತನು ತನ್ನ ಸ್ವಂತ ಲಾಭಕ್ಕಾಗಿ ಸಾರ್ವಜನಿಕರನ್ನು ಗುಂಪುಗೂಡಿಸಿಕೊಂಡು ಮಟ್ಕಾ ಜುಗಾರಿ ಆಟಕ್ಕೆ ಹಣವನ್ನು ಸಂಗ್ರಹ ಮಾಡುತ್ತಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
- ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ U/S 78(3) KP ACT ರಂತೆ ಪ್ರಕರಣ ದಾಖಲಾಗಿದೆ.