ಉಡುಪಿ: ದಿನಾಂಕ 06-07-2023(ಹಾಯ್ ಉಡುಪಿ ನ್ಯೂಸ್) ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡವೊಂದಕ್ಕೆ ಅಕ್ರಮ ವಾಗಿ ನುಗ್ಗಿದ ಪೈಂಟಿಂಗ್ ಕೆಲಸಗಾರರ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಒಳಕಾಡು , ಪಿಪಿಸಿ ರಸ್ತೆ ನಿವಾಸಿ ಅಮ್ರತ್ ಶೆಣೈ (45) ಎಂಬವರು ಮೂಡನಿಡಂಬೂರು ಗ್ರಾಮದ ಮದರ್ ಆಫ್ ಸೊರೊಸ್ ಚರ್ಚ್ ಹಿಂಭಾಗದಲ್ಲಿರುವ ವೈಜರ್ ಹೆಸರಿನ ಬಹುಮಹಡಿ ಕಟ್ಟಡದ ಮಾಲೀಕರಾಗಿದ್ದು, ದಿನಾಂಕ 05/07/2023 ರಂದು ಬೆಳಿಗ್ಗೆ 11:00 ಗಂಟೆಗೆ ಕೆಲವು ವ್ಯಕ್ತಿಗಳು ವೈಜರ್ ಕಟ್ಟಡಕ್ಕೆ ಅಕ್ರಮ ಪ್ರವೇಶ ಮಾಡಿ ಪೈಂಟಿಂಗ್ ಕೆಲಸ ಮಾಡುತ್ತಿದ್ದು, ಅವರುಗಳಿಗೆ ಆದಮ್ ಎಂಬ ವ್ಯಕ್ತಿ ಈ ಕೆಲಸಕ್ಕೆ ವಹಿಸಿದ್ದು, ಈತನು ಹಲವು ಬಾರಿ ಕಟ್ಟಡಕ್ಕೆ ಬಂದು ಇತರ ಫ್ಲ್ಯಾಟ್ ಗಳಿಗೆ ಹೋಗಿ ಅಕ್ರಮ ಪ್ರವೇಶ ಮಾಡಿರುತ್ತಾನೆ ಎಂದು ಅಮ್ರತ್ ಶೆಣೈ ಎಂಬುವರು ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 447, 448 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.