ಕಾಪು: ದಿನಾಂಕ:4-07-2023(ಹಾಯ್ ಉಡುಪಿ ನ್ಯೂಸ್) ಸ್ನೇಹಿತರ ನಡುವಿನ ಹಳೆಯ ದ್ವೇಷದಿಂದ ಸ್ನೇಹಿತನನ್ನೇ ಕೊಲೆ ಮಾಡಲು ಯತ್ನಿಸಿದ ಘಟನೆ ಪಳ್ಳಿ ಗುಡ್ಡೆ ಯಲ್ಲಿ ನಡೆದಿದೆ.
ಕಾಪು ,ಏಣಗುಡ್ಡೆ, ಪಳ್ಳಿ ಗುಡ್ಡೆ,ಜೆ .ಎನ್ ನಗರ ನಿವಾಸಿ ಉಬೆದುಲ್ಲಾ (29) ಹಾಗೂ ಅಭಿಷೇಕ್ ಎಂಬವರು ಮೊದಲಿನಿಂದಲೂ ಒಳ್ಳೆಯ ಸ್ನೇಹಿತರಾಗಿದ್ದು, ಸುಮಾರು ಒಂದು ವರ್ಷದ ಹಿಂದೆ ಅಭಿಷೇಕ್ ನು ಉಬೆದುಲ್ಲಾರವರನ್ನು ಕರೆದುಕೊಂಡು ಮಣಿಪಾಲದ ಅವನ ಪರಿಚಯದವರ ಮನೆಗೆ ಊಟಕ್ಕೆಂದು ಹೋದ ಸಮಯ ಅಭಿಷೇಕ್ ನು ಆ ಮನೆಯವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ಪರಿಣಾಮ ಆ ಮನೆಯವರು ಅಭಿಷೇಕ್ ನಿಗೆ ಹೊಡೆದಿರುತ್ತಾರೆ ಎನ್ನಲಾಗಿದೆ. ಆ ಸಮಯ ಉಬೆದುಲ್ಲಾ ನು ಆ ಮನೆಯವರನ್ನು ಅಬಿಷೇಕನಿಗೆ ಹೊಡೆಯದಂತೆ ತಡೆಯಲು ಹೋಗಿರುವುದಿಲ್ಲ. ಇದೇ ಕಾರಣದಿಂದ ಅಭಿಷೇಕನು ಉಬೆದುಲ್ಲಾರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದು, ಅಲ್ಲದೆ ಉಬೆದುಲ್ಲಾರ ವಿರುದ್ಧ ದ್ವೇಷ ಬಾವನೆಯನ್ನು ಹೊಂದಿ ಇದೇ ವಿಚಾರವಾಗಿ ಈ ಹಿಂದೆ ಮಂಚಿಯ ಡಿ.ಡಿ ಬಾರ್ ನ ಬಳಿ ಉಬೆದುಲ್ಲಾನ ಮೇಲೆ ಹಲ್ಲೆಯನ್ನು ನಡೆಸಿರುತ್ತಾರೆ ಎಂದು ಉಬೇದುಲ್ಲಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದೇ ವಿಚಾರವಾಗಿ ಉಬೇದುಲ್ಲಾರನ್ನು ಕೊಲ್ಲುವ ಉದ್ದೇಶದಿಂದ ದಿನಾಂಕ: 02-07-2023 ರಂದು ಉಬೇದುಲ್ಲಾ ತನ್ನ ಸ್ನೇಹಿತರಾದ ಸುಕೇಶ್. ಶರತ್, ಹರೀಶ್ ಹಾಗೂ ಮಂಜು ಎಂಬುವವರೊಂದಿಗೆ ಮದ್ಯ ಸೇವಿಸುತ್ತಿದ್ದ ಉಡುಪಿ ಜಿಲ್ಲೆ ಕಾಪು ತಾಲ್ಲೂಕು ಏಣಗುಡ್ಡೆ ಗ್ರಾಮದ ಪಳ್ಳಿಗುಡ್ಡೆಯಲ್ಲಿರುವ ಪಂಚಮಿ ಬಾರ್ & ರೆಸ್ಟೊರೆಂಟ್ ನ ಕ್ಯಾಬಿನ್ ಬಳಿ ಹೋಗಿ ಹೊರಗೆ ಬಾ ಎಂದು ಅಭಿಷೇಕ್ ಏರು ದ್ವನಿಯಲ್ಲಿ ಹೇಳಿದ್ದು, ಅದರಂತೆ ಉಬೇದುಲ್ಲ ಬಾರ್ ನ ಹೊರಗಡೆ ಹೋದ ಸಮಯ 3 ಜನ ಸೇರಿ ಉಬೇದುಲ್ಲ ರಿಗೆ ಕೈಯಿಂದ ಹೊಡೆಯಲು ಆರಂಭಿಸಿದ್ದು, ಇದೇ ಸಮಯದಲ್ಲಿ ಕಾರ್ತಿಕ್ ಎಂಬವನು ಪಕ್ಕದಲ್ಲಿದ್ದ ಮರದ ಕಟ್ಟಿಗೆಯನ್ನು ತೆಗೆದುಕೊಂಡು ಬಂದು ಉಬೇದುಲ್ಲಾರ ಬೆನ್ನಿಗೆ ಹೊಡೆದಿದ್ದು, ಅಭಿಷೇಕ್ ನು ತನ್ನ ಜೇಬಿನಲ್ಲಿದ್ದ ಸಣ್ಣ ಚೂರಿಯನ್ನು ತೆಗೆದು ಉಬೇದುಲ್ಲಾರ ಬಲಗೈ ಹಾಗೂ ಎಡಗೈ ಗೆ ಅಲ್ಲಲ್ಲಿ ಚುಚ್ಚಿರುತ್ತಾನೆ . ಬಳಿಕ ಕಾರ್ತಿಕ್ ತನ್ನ ಕೈಯಲ್ಲಿದ್ದ ಮರದ ಕಟ್ಟಿಗೆಯನ್ನು ಬಿಸಾಡಿ ತನ್ನ ಜೇಬಿನಿಂದ ಕಬ್ಬಿಣದ ಪಂಚ್ ನ್ನು ತೆಗೆದು ಅದರಿಂದ ಉಬೇದುಲ್ಲಾರ ತಲೆಯ ಹಿಂಭಾಗ ಮತ್ತು ಮುಂಭಾಗಕ್ಕೆ ಹೊಡೆದಿದ್ದು, ಇದರಿಂದ ಉಬೇದುಲ್ಲಾರ ತಲೆಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿರುತ್ತದೆ ಎಂದು ದೂರಿದ್ದಾರೆ.
ಆ ವೇಳೆಗೆ ಉಬೇದುಲ್ಲಾರ ಪರಿಚಯದ ಕೇಶವ ಎಂಬವರು ಸ್ಥಳಕ್ಕೆ ಬಂದು ಉಬೇದುಲ್ಲಾರಿಗೆ ಹೊಡೆಯದಂತೆ ತಡೆದಿದ್ದು, ಇದೇ ಸಮಯ ಉಬೇದುಲ್ಲಾರು ಅವರಿಂದ ತಪ್ಪಿಸಿಕೊಂಡು ಬಾರ್ ನ ಹಿಂಬದಿಗೆ ಹೋಗಿದ್ದು, ಅಲ್ಲಿಗೆ ಹೋದ ಉಬೇದುಲ್ಲಾರ ಸ್ನೇಹಿತರಾದ ಸುಕೇಶ್. ಶರತ್, ಹರೀಶ್ ಹಾಗೂ ಮಂಜು ರವರುಗಳು ರಿಕ್ಷಾವೊಂದರಲ್ಲಿ ಉಬೇದುಲ್ಲಾ ರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ ಎನ್ನಲಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಕಲಂ : 323, 307, 504,506, ಜೊತೆಗೆ 34 ಐ.ಪಿ.ಸಿ. ಯಂತೆ ಪ್ರಕರಣ ದಾಖಲಿಸಲಾಗಿದೆ.