Spread the love
  • ಗಂಗೊಳ್ಳಿ : ದಿನಾ‍ಂಕ : 27-06-2023 (ಹಾಯ್ ಉಡುಪಿ ನ್ಯೂಸ್) ತ್ರಾಸಿ ಗ್ರಾಮದ ಮನೀಶ್ ಬಾರ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ನಾಲ್ವರನ್ನು ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಯುವರಾಜ್ ಹರೀಶ್ ಆರ್ ರವರು ಬಂಧಿಸಿದ್ದಾರೆ.
  • ಗಂಗೊಳ್ಳಿ ಪೊಲೀಸ್ ಠಾಣೆಯ ಪಿ.ಎಸ್‌ ಐ ಯುವರಾಜ್ ಹರೀಶ್‌ ಆರ್‌ ರವರು ದಿನಾಂಕ: 25:06:2023ರಂದು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ತ್ರಾಸಿ ಗ್ರಾಮದ ಬೀಟ್‌ ಸಿಬ್ಬಂದಿ ಹೆಚ್.ಸಿ ರಾಮಚಂದ್ರರವರು  ದೂರವಾಣಿ ಕರೆ ಮಾಡಿ  ತ್ರಾಸಿ ಗ್ರಾಮದ ಮನೀಷ್‌ ಬಾರ್‌ &ರೆಸ್ಟೋರೆಂಟ್‌ ನ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ನೀಡಿದ ಮೇರೆಗೆ ಗಂಗೊಳ್ಳಿ ಪೊಲೀಸ್ ಠಾಣಾ ಪಿ.ಎಸ್‌.ಐ ಹರೀಶ್‌  ಆರ್‌ ರವರು ಸಿಬ್ಬಂದಿಯವರೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ಕೂಡಲೇ ಧಾಳಿ ನಡೆಸಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆಪಾದಿತರಾದ 1. .ಶಂಕರ ದೇವಾಡಿಗ  2. ಗಣೇಶ ಕೃಷ್ಣ ದೇವಾಡಿಗ, 3. ವಿಶ್ವನಾಥ ದೇವಾಡಿಗ, 4. ಬಾಬು ಪೂಜಾರಿ, ಎಂಬುವವರನ್ನು ಬಂಧಿಸಿ ವಶಕ್ಕೆ ಪಡೆದಿದ್ದು, ಬಳಿಕ ಕೃತ್ಯಕ್ಕೆ ಬಳಸಿದ ನಗದು 3,800/- ರೂ, ಇಸ್ಪೀಟ್‌ಎಲೆಗಳು –52,ಹಳೆಯ ಬೆಡ್‌ ಶೀಟ್‌ -1 ,ಉರಿದ ಮೇಣದ ಬತ್ತಿ -2  ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ .
  • ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಕಲಂ 87, ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
error: No Copying!