Spread the love

ಬ್ರಹ್ಮಾವರ: ದಿನಾಂಕ:11-06-2023(ಹಾಯ್ ಉಡುಪಿ ನ್ಯೂಸ್) ಗಂಡನೋರ್ವನು ವರದಕ್ಷಿಣೆ ಗಾಗಿ ತನ್ನ ಮನೆಯವರೊಂದಿಗೆ ಸೇರಿ ಕೊಂಡು ಹೆಂಡತಿಗೆ ಮಾನಸಿಕ, ದೈಹಿಕ ಹಿಂಸೆ ನೀಡಿ, ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿರುವ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಂಗಳೂರು, ಕಾಪಿಕಾಡ್,ಬಿಜೈ ನಿವಾಸಿ ಶ್ವೇತಾ ಕೆ (35) ಎಂಬವರು ದಿನಾಂಕ 20.10.2021 ರಂದು ಬ್ರಹ್ಮಾವರ ತಾಲೂಕು ಬೈಕಾಡಿ ಗ್ರಾಮದ ನಿವಾಸಿ ಪ್ರಶಾಂತ ಎಂಬವನೊಂದಿಗೆ ಗುರು ಹಿರಿಯರ ಒಪ್ಪಿಗೆ ಮೇರೆಗೆ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮದುವೆ ಆಗಿದ್ದು ಗಂಡನ ಮನೆಯವರು ತಿಳಿಸಿದಂತೆ ಮದುವೆಯ ಖರ್ಚನ್ನು ಸಂಪೂರ್ಣವಾಗಿ ಶ್ವೇತಾ ಕೆ.ರವರ ಮನೆಯವರೇ ನೋಡಿಕೊಂಡಿದ್ದು, ಔತಣ ಕೂಟವನ್ನು ಪಡುಬಿದ್ರೆ ಜಂಕ್ಷನ್ ನಲ್ಲಿರುವ ಸುಜಾತ ಆಡಿಟೋರಿಯಮ್ ಹಾಲ್ ನಲ್ಲಿ ನಡೆಸಿ ಕೊಟ್ಟಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮದುವೆಯ ನಂತರ ಗಂಡನಾದ ಪ್ರಶಾಂತನು ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದು, ಮನೆಯ ಖರ್ಚನ್ನೆಲ್ಲಾ ಶ್ವೇತಾ ಕೆ ರವರೇ ನೋಡಿಕೊಳ್ಳುತ್ತಿದ್ದರು ಎಂದಿದ್ದಾರೆ . ಗಂಡನಾದ ಪ್ರಶಾಂತನಿಗೆ ಕೆಲಸಕ್ಕೆ ಹೋಗಲು ಹೇಳಿದರೇ ಶ್ವೇತಾಳಿಗೆ ನೀನು ಮದುವೆ ಸಮಯ ವರದಕ್ಷಿಣೆ ನೀಡಲಿಲ್ಲ, ಈಗ ನಮ್ಮನ್ನೆಲ್ಲಾ  ಸಾಕು ಎಂದು  ಗಂಡನ ಮನೆಯವರುಗಳಾದ  2] ಶಂಕರ, 3] ಪದ್ಮಾ 4] ಪ್ರಮೀಳಾ 5] ಪ್ರೇಮಾ 6] ಗಣೇಶ್‌,  7] ಸಂತೋಷ್‌  ಇವರುಗಳು ಕೆಟ್ಟದ್ದಾಗಿ,  ಬೈದು, ಸರಿಯಾಗಿ ಊಟವನ್ನು ಕೊಡದೇ ತೊಂದರೇ ಕೊಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಶ್ವೇತಾರವರು ಗರ್ಭಿಣಿ ಆದ ನಂತರ ಆರೋಪಿಗಳು ಶ್ವೇತಾ ರನ್ನು ಹಣಕ್ಕಾಗಿ ಪೀಡಿಸಿ, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ, ಅವಳನ್ನು ಮಂಗಳೂರಿನಲ್ಲಿರುವ ಅವಳ ತಾಯಿ ಮನೆಗೆ ಕಳುಹಿಸಿ, ಅಲ್ಲಿಗೆ ಹೋದಾಗಲೂ ಕೂಡ ಆರೋಪಿತರು ಅವಳಿಗೆ ಹಣಕ್ಕಾಗಿ ಪೀಡಿಸಿ, ಕೈಯಿಂದ ಹೊಡೆದು ಜೀವ ಬೆದರಿಕೆ ಹಾಕಿ ಹೋಗುತ್ತಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿ ಗಂಡನಾದ ಪ್ರಶಾಂತನು   8 ನೇ ಆರೋಪಿತೆ ಅನುಷಾ ಎಂಬವಳೊಂದಿಗೆ  ಮೊದಲಿನಿಂದಲೂ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದು ಈ ಬಗ್ಗೆ ಶ್ವೇತಾ ರವರು ತಿಳಿದು ದೂರು ನೀಡಿದ್ದರೂ ಅನುಷಾಳು  ಗಂಡ ಪ್ರಶಾಂತನ  ಮನೆಯಲ್ಲಿಯೇ ಇದ್ದು ಅವನ ಜೋತೆ ಸೇರಿ ಶ್ವೇತಾರ ಸಾಂಸಾರ  ಒಡೆಯುವುದಕ್ಕೆ ಕಾರಣವಾಗಿರುತ್ತಾಳೆ ಎಂದು ಆರೋಪಿಸಿದ್ದಾರೆ.

ದಿನಾಂಕ 15.08.2022 ರಂದು ಶ್ವೇತಾ ರವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆಗ ಶ್ವೇತಾ ರವರು ಹಣ ಕೇಳಿದ ಆರೋಪಿ ಗಂಡನಿಗೆ ಹಣ ನೀಡಲು ನಿರಾಕರಿಸಿದ್ದರಿಂದ ಆರೋಪಿ ಗಂಡ ಪ್ರಶಾಂತ ನು ಸಿಟ್ಟಿನಲ್ಲಿ  ಮಗುವನ್ನು  ನೋಡಲು ಬಾರದೇ̧  ಬೈದು ನಿನ್ನನ್ನು ಹಾಗೂ ಮಗುವನ್ನು ಕೊಂದು ಹಾಕುತ್ತೇನೆಂದು ಬೆದರಿಕೆ ಹಾಕಿರುತ್ತಾರೆ ಎಂದು ದೂರಿದ್ದಾರೆ.

ಗಂಡನಾದ ಪ್ರಶಾಂತನು, ಶ್ವೇತಾರ ಮಗುವಿನ ಜನ್ಮ ರಹಸ್ಯ ಇತ್ಯರ್ಥ ಪಡಿಸಿಕೊಳ್ಳುವ ಬಗ್ಗೆ ದಿನಾಂಕ 08.06.2023 ರಂದು ಬೈಕಾಡಿಯ ಆರೋಪಿತರ ಮನೆಯಲ್ಲಿ ನಡೆಯುವ  ದೇವರ ದರ್ಶನಕ್ಕೆ ಶ್ವೇತಾರನ್ನು ಕರೆಸಿದ್ದು, ಶ್ವೇತಾ ರವರು  ಸಾಂಸಾರಿಕ ಜೀವನ ಸರಿಪಡಿಸಿಕೊಳ್ಳುವ ಬಗ್ಗೆ ಮಗುವನ್ನು ಕರೆದುಕೊಂಡು ಗಂಡನ ಮನೆಗೆ ದರ್ಶನಕ್ಕೆ ಹೋಗಿ, ರಾತ್ರಿ 9:30 ಗಂಟೆಯ ಸಮಯಕ್ಕೆ ದರ್ಶನದಲ್ಲಿ ಶ್ವೇತಾ ರವರು ಅವರ ಸಂಸಾರದ ವಿಚಾರವನ್ನು ವ್ಯಕ್ತ ಪಡಿಸಲು ಹೋದಾಗ  ಗಂಡ ಹಾಗೂ ಗಂಡನ ಮನೆಯವರು ಕೈಗಳಿಂದ ಹೊಡೆದು, ಜುಟ್ಟು ಎಳೆದು, ಬೈದು,  ನೆಲಕ್ಕೆ ಉರುಳಿಸಿ, ತುಳಿದು, ನಿನ್ನನ್ನು ಇಲ್ಲೇ ಕೊಂದು ಹಾಕುವುದಾಗಿ  ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಶ್ವೇತಾ ರವರು ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಕಲಂ 498A, 323, 504, 506 ಜೊತೆಗೆ 149 IPC & 4 DP ACT ಯಂತೆ ಪ್ರಕರಣ ದಾಖಲಾಗಿದೆ.

error: No Copying!