ಉಡುಪಿ: ದಿನಾಂಕ:21-05-2023( ಹಾಯ್ ಉಡುಪಿ ನ್ಯೂಸ್) ಉಡುಪಿ ಕಾಂಗ್ರೆಸ್ ಹಿರಿಯ ನಾಯಕ, ಉಡುಪಿ ವಿಧಾನಸಭಾ ಕ್ಷೇತ್ರದ ಎರಡು ಅವಧಿಯ ಜನಪ್ರಿಯ ಶಾಸಕರು, ಉಡುಪಿ ಜಿಲ್ಲೆಯಾಗಿಸಿದ ಹರಿಕಾರ , ಉಡುಪಿ ಸರಕಾರಿ ಆಸ್ಪತ್ರೆಯನ್ನು ಪುನಶ್ಚೇತನ ಗೊಳಿಸಿದ ಬಡವರ ಬಂಧು ಉಡುಪಿ ಬಡಗು ಪೇಟೆ ನಿವಾಸಿ ಯು.ಆರ್ ಸಭಾಪತಿ ಯವರು ಒಂದು ವರ್ಷ ದಿಂದ ಗಂಟಲಿನ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ಇಂದು ಸ್ವಗ್ರಹದಲ್ಲಿ ನಿಧನರಾದರು.
ತನ್ನ ಶಾಸಕತ್ವ ದ ಅವಧಿಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದುದನ್ನು ಜನರು ಇಂದಿಗೂ ಮರೆತಿಲ್ಲ.ಇದು ಬಡವರ ಪರ ಅವರ ವಿಶೇಷ ಕಾಳಜಿಯಾಗಿತ್ತು. ಉಡುಪಿ ಓರ್ವ ಧೀಮಂತ ನಾಯಕ ನನ್ನು ಕಳೆದುಕೊಂಡಂತಾಗಿದೆ. ಯು.ಆರ್.ಸಭಾಪತಿಯವರ ಅಗಲಿಕೆ ಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.