Spread the love
  • ಉಡುಪಿ : ದಿನಾಂಕ:19:05.2023 (ಹಾಯ್ ಉಡುಪಿ ನ್ಯೂಸ್) ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾತಿಗಾಗಿ ನೋಂದಣಿ ನಂಬ್ರಕ್ಕೆ ಕರೆ ಮಾಡಿದಾಗ ಆ ನಂಬರಿನವನು ಬೇರೆ ದೂರವಾಣಿ ಸಂಖ್ಯೆ ಯನ್ನು ನೀಡಿ ಆ ಮೂಲಕ ಹಣ ಎಗರಿಸಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  • ಮಹಾದೇವ, ಪ್ರಾಯ:33 ವರ್ಷ, ತಂದೆ:ಜೋಗಯ್ಯ ಪೂಜಾರಿ, ವಾಸ: ಹೊಸಒಕ್ಲಲು ಮನೆ, ನೀರಗದ್ದೆ, ಶಿರೂರು, ಬೈಂದೂರು ತಾಲೂಕು , ಎಂಬವರು ದಿನಾಂಕ:17-05-2023ರಂದು ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಯಲ್ಲಿ ದಾಖಲಾತಿಗಾಗಿ ಗೂಗಲ್ ನ ಸಹಾಯದಿಂದ ಸಂಪರ್ಕ ಸಂಖ್ಯೆಯನ್ನು ಹುಡುಕಿದಾಗ ನಂಬ್ರ: 7667844106 ದೊರೆತಿದ್ದು, ಆತನಿಗೆ ಕರೆ ಮಾಡಿ ವಿಚಾರ ಹೇಳಿದಾಗ ಇನ್ನೊಂದು ದೂರವಾಣಿ ಸಂಖ್ಯೆ  9162124966 ನೇದರ ಮೂಲಕ ಕಸ್ಟಮರ್ ಸಫೋರ್ಟ (1.0) ಆ್ಯಪ್ ನ್ನು ವಾಟ್ಸ್ ಅಪ್ ಮೂಲಕ ಕಳುಹಿಸಿ ಅದರಲ್ಲಿ ವಿವರಗಳನ್ನು ಪೂರ್ಣಗೊಳಿಸಲು ಸೂಚಿಸಿ, ಹಣ ಪಾವತಿಸುವಂತೆ ತಿಳಿಸಿದ ಮೇರೆಗೆ ಮಹಾದೇವ ಇದನ್ನು ನಂಬಿಕೊಂಡು ಫೋನ್ ಫೇ ಮುಖೇನ ಪಾಸ್ ವರ್ಡ ನ್ನು ಹಾಗೂ ಆ ವ್ಯಕ್ತಿ ಕಲುಹಿಸಿದ ಓಟಿಪಿ ಸಂಖ್ಯೆ ಯನ್ನು ಕೂಡ ನಮೂದಿಸಿದ್ದು, ಆ ನಂತ್ರ ಅಪಾಯಿಂಟ್ ಮೆಂಟ್ ಕೋಡ್ ನ್ನು ಕಳುಹಿಸಿ ಮಾರನೆಯ ದಿನ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದರು ಎಂದು ದೂರಿದ್ದಾರೆ.
  • ದಿನಾಂಕ: 18-05-2023 ರಂದು ಬೆಳಿಗ್ಗೆ 10:20 ಗಂಟೆಗೆ ಮಹಾದೇವರ ಕರ್ನಾಟಕ ಬ್ಯಾಂಕ್ ಹಟ್ಟಿಯಂಗಡಿ ಶಾಖೆಯ ಎಸ್.ಬಿ ಖಾತೆಯಿಂದ ಕ್ರಮವಾಗಿ, ರೂ.88,880/-, 9,532/-, 1,580/- ರಂತೆ ಒಟ್ಟು ರೂ. 99,992/- ಹಣವನ್ನು .ಮೋಸದಿಂದ ವರ್ಗಾಯಿಸಿಕೊಂಡು ನಷ್ಟ ಉಂಟು ಮಾಡಿರುತ್ತಾರೆ ಎಂದು ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.. ಈ ಬಗ್ಗೆ Sen ಅಪರಾಧ ಪೊಲೀಸ್‌ ಠಾಣೆಯಲ್ಲಿ ಕಲಂ: 66(C), 66(D) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.
error: No Copying!