Spread the love
  • ಪಡುಬಿದ್ರಿ: ದಿನಾಂಕ 26-04-2023(ಹಾಯ್ ಉಡುಪಿ ನ್ಯೂಸ್) ಪಡುಬಿದ್ರಿಯ ಬಟ್ಟೆ ಅಂಗಡಿಯೊಂದರಲ್ಲಿ ಕಳ್ಳರು ನುಗ್ಗಿ 3 ಲಕ್ಷ ಬೆಲೆ ಬಾಳುವ ವಸ್ತೃಗಳನ್ನು ಹಾಗೂ ನಗದು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  • ಮಂಗಳೂರು ತಾಲೂಕು, ಸುರತ್ಕಲ್,ಕ್ರಷ್ಣಾಪುರ ನಿವಾಸಿ ಶ್ರೀಮತಿ ನಯನ ಸಾಗರ್ (38) ಎಂಬವರು ಉಡುಪಿ ಜಿಲ್ಲೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಸಾಸ್ ಬಿಲ್ಡಿಂಗ್‌‌ನಲ್ಲಿ ಶ್ರೀಶಾ ಅಪಾರೆಲ್ಸ್ ಹೆಸರಿನ ಬಟ್ಟೆ ಅಂಗಡಿ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ.
  • ಎಂದಿನಂತೆ ದಿನಾಂಕ 24/04/2023 ರಂದು ರಾತ್ರಿ ಅಂಗಡಿಯ ಶೆಟರಿಗೆ ಬೀಗ ಹಾಕಿ ಹೋಗಿದ್ದು, ನಂತರ ಯಾರೋ ಕಳ್ಳರು ರಾತ್ರಿ ಹೊತ್ತಿನಲ್ಲಿ ಶ್ರೀಶಾ ಅಪಾರೆಲ್ಸ್ ಹೆಸರಿನ ಬಟ್ಟೆ ಅಂಗಡಿಗೆ ಹಾಕಿದ್ದ ಶೆಟರ್‌‌ನ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಬಾಗಿಲನ್ನು ತೆರೆದು ಒಳ ಪ್ರವೇಶಿಸಿ, 1] U.S, ಪೋಲೋ, ಲೆವಿಸ್, ಸಾಟ್‌ಜಿ, ಸ್ಟಾರ್, ರೆಬೆಲ್ ಕಂಪನಿಯ ಸುಮಾರು 100 ಜೀನ್ಸ್ ಪ್ಯಾಂಟ್‌‌ಗಳು (ಮೌಲ್ಯ ರೂಪಾಯಿ 90,000/-), 2] U.S, ಪೋಲೋ, ಆಕ್ಸಿರೇಟ್, ಫಾಕ್ಸ್ ಆರೋ, ಕಂಪನಿಯ ಸುಮಾರು 250 ಶರ್ಟ್‌‌ಗಳು (ಮೌಲ್ಯ ರೂಪಾಯಿ 1,70,000/-), 3] ಸ್ಕೂಲ್ ಬ್ಯಾಗ್‌‌‌ಗಳು -15 (ಮೌಲ್ಯ ರೂಪಾಯಿ 9,000/-), 4] ಸಾಫ್ ಜಾಕೇಟ್  20 ಪೀಸ್‌ ( ಮೌಲ್ಯ  4,000/-), 5] ಟೈರಾ ಲೆಗ್ಗಿಂಗ್ಸ್ – 35 ( ಮೌಲ್ಯ  8,500/-), 6] ಡ್ರಾವರ್‌‌‌ನಲ್ಲಿದ್ದ ನಗದು  2,000/-  ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಎಲ್ಲಾ ವಸ್ತುಗಳ ಒಟ್ಟು ಮೌಲ್ಯ  2,83,500/- ರೂಪಾಯಿ ಆಗಿರುತ್ತದೆ ಎಂದು ಶ್ರೀಮತಿ ನಯನ ಸಾಗರ್ ರವರು ಪೊಲೀಸರಿಗೆ ದೂರನ್ನು ನೀಡಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
error: No Copying!