Spread the love

ಉಡುಪಿ: ದಿನಾಂಕ:12-04-2023(ಹಾಯ್ ಉಡುಪಿ ನ್ಯೂಸ್) ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ವಂಚಿತ ಶಾಸಕ ರಘುಪತಿ ಭಟ್ ಪಕ್ಷದ ನಿರ್ಧಾರದಿಂದ ಅಸಮಾಧಾನ ಗೊಂಡಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ತನ್ನನ್ನು ತುಂಬಾ ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ. ತನಗೆ ಈ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಪಕ್ಷದ ರಾಜ್ಯ ನಾಯಕರಾಗಲಿ, ಜಿಲ್ಲಾಧ್ಯಕ್ಷರಾಗಲಿ ಕರೆಯನ್ನೇ ಮಾಡಿಲ್ಲ,ಇದು ತುಂಬಾ ದುಃಖವನ್ನು ಉಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾನು ಟಿಕೆಟ್ಗಾಗಿ ಲಾಬಿ ನಡೆಸಿಲ್ಲ . ಮುಂದಿನ ನಿರ್ಧಾರದ ಬಗ್ಗೆಯೋಚಿಸಿಲ್ಲ, ಇತರ ಪಕ್ಷಗಳಿಗೆ ಸೇರುವ ಪ್ರಶ್ನೆಯೇ ಇಲ್ಲ, ಕಾರ್ಯಕರ್ತರ ಕೈ ಬಿಡುವುದಿಲ್ಲ ಎಂದಿದ್ದಾರೆ.

error: No Copying!