Spread the love

ಉಡುಪಿ: ದಿನಾಂಕ:08-04-2023(ಹಾಯ್ ಉಡುಪಿ ನ್ಯೂಸ್) ಉಡುಪಿ ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನ ಕ್ಕೆಂದು ಬಂದ ಯಾತ್ರಾರ್ಥಿಗಳ ಪರ್ಸ್ ನಿಂದ ಯಾರೋ ಕಳ್ಳರು 8.50 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.

ಆಂಧ್ರಪ್ರದೇಶದ (54)ಡಿ-1084, ಮೂವಿ ಟವರ್‌, ಕೋಕಾ ಪೆಟ್‌, ಹೈದರಾಬಾದ್‌, ಆಂಧ್ರ ಪ್ರದೇಶ ರಾಜ್ಯದ ನಿವಾಸಿ ಶ್ರೀಮತಿ ತಾಡುರಿ ಪದ್ಮಜಾ (54) ಎಂಬವರು ತನ್ನ ಗಂಡ ತಾಡುರಿ ಶ್ರೀ ರಾಮುಲು ಎಂಬವರೊಂದಿಗೆ ಧಾರ್ಮಿಕ ಕ್ಷೇತ್ರಗಳ ಭೇಟಿಯ ಸಲುವಾಗಿ ದಿನಾಂಕ 05/04/2023 ರಂದು ಉಡುಪಿಗೆ ಬಂದು, ಉಡುಪಿಯ ವೈಟ್‌ಲೋಟಸ್‌ ಹೋಟೆಲ್‌ನಲ್ಲಿ ತಂಗಿದ್ದರೆಂದು ಹೇಳಿದ್ದಾರೆ.

ದಿನಾಂಕ 07/04/2023 ರಂದು ಬೆಳಿಗ್ಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನಕ್ಕೆ ಹೋಗಿದ್ದು, ಬೆಳಿಗ್ಗೆ 05:00 ಗಂಟೆಯಿಂದ ಬೆಳಿಗ್ಗೆ 06:21 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಶ್ರೀಮತಿ ತಾಡುರಿ ಪದ್ಮಜಾ ರವರ ಹ್ಯಾಂಡ್‌  ಬ್ಯಾಗ್‌ ನಲ್ಲಿ  ಸಣ್ಣ  ಪೌಚ್‌ ನಲ್ಲಿ ಹಾಕಿಟ್ಟಿದ್ದ ಅವರ 6 ಚಿನ್ನದ ಬಳೆ ಹಾಗೂ  1 ಉದ್ದದ  ಹವಳ ಹಾಗೂ ಚಿನ್ನದ ಸರವನ್ನು ಪೌಚ್‌ ಸಮೇತ ಕಳವು ಮಾಡಿದ್ದು, ಕಳವಾದ ಚಿನ್ನಾಭರಣಗಳ ಒಟ್ಟು ತೂಕ 142 ಗ್ರಾಂ ಆಗಿದ್ದು,  ಮೌಲ್ಯ ರೂಪಾಯಿ 8,50,000/- ಆಗಿರುತ್ತದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಾಗಿರುತ್ತದೆ.

error: No Copying!