Spread the love

ಮಲ್ಪೆ: ದಿನಾಂಕ 05/4/2023 (ಹಾಯ್ ಉಡುಪಿ ನ್ಯೂಸ್) ಕಾರಿನಲ್ಲಿ ದಾಖಲೆಗಳಿಲ್ಲದೆ ಸಾಗಾಟ ಮಾಡುತ್ತಿದ್ದ ನಿಷೇಧಿತ ಪ್ಲಾಸ್ಟಿಕ್ ಚೀಲಗಳನ್ನು ಮಲ್ಪೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಲ್ಪೆ ಪೊಲೀಸ್‌ ಠಾಣೆ , ಪೊಲೀಸ್ ಉಪ ನಿರೀಕ್ಷಕರಾದ ಗುರುನಾಥ ಬಿ ಹಾದಿಮನಿ ಅವರು ದಿನಾಂಕ:4-04-2023 ರಂದು ರೌಂಡ್ಸ್  ಕರ್ತವ್ಯದಲ್ಲಿ ಇರುವಾಗ  ಸಂತೆಕಟ್ಟೆ ಏಕ್ತಾ ಅಪಾರ್ಟ್ ಮೆಂಟ್ ಬಳಿ  ಸಂತೆಕಟ್ಟೆ ಕಡೆಯಿಂದ KA-20-P-6382 ನೇ ಬಿಳಿ ಬಣ್ಣದ ಮಾರುತಿ ಓಮಿನಿ ಕಾರು ವೇಗವಾಗಿ ನೇಜಾರು ಕಡೆಗೆ ಹೋಗುತ್ತಿದ್ದು ಓಮಿನಿ ಕಾರನ್ನು ಪೊಲೀಸರು ಇಲಾಖಾ ವಾಹನದಲ್ಲಿ ಬೆನ್ನಟ್ಟಿ ಹೋದಾಗ ನೇಜಾರು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿ ಇದ್ದ ಪೊಲೀಸ್‌ ಉಪನಿರೀಕ್ಷಕರಾದ(ತನಿಖೆ) ಸುಧಾ ಪ್ರಭು ಹಾಗೂ  ಠಾಣಾ ಸಿಬ್ಬಂದಿಯವರು  ನೇಜಾರು ಚೆಕ್ ಪೋಸ್ಟ್ ನಲ್ಲಿ ವಾಹನವನ್ನು ತಡೆದು ನಿಲ್ಲಿಸಿದ್ದು ; KA-20-P-6382 ನೇ ಮಾರುತಿ ಓಮಿನಿ ಕಾರನ್ನು ತಪಾಸಣೆ ನಡೆಸಿದಾಗ ಕಾರಿನ ಹಿಂಬದಿ ಸೀಟಿನ ಬಳಿ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಲಾಸ್ಟಿಕ್ ತೊಟ್ಟೆಗಳ ಪ್ಯಾಕೇಟ್ ಗಳಿದ್ದು ಓಮಿನಿ ಚಾಲಕ ಅಪ್ರೂದ್ಧೀನ್ ಎಂಬವರಲ್ಲಿ ದಾಖಲಾತಿ ನೀಡುವಂತೆ ಕೇಳಿದಾಗ ತನ್ನ ಬಳಿ ಯಾವುದೇ ದಾಖಲಾತಿ ಇರುವುದಿಲ್ಲವಾಗಿ ತಿಳಿಸಿದ್ದು.  KA-20-P-6382 ನೇ ಮಾರುತಿ ಓಮಿನಿ ಕಾರಿನಲ್ಲಿ ಇದ್ದ ಸೊತ್ತುಗಳನ್ನು ಪೊಲೀಸರು ಪರಿಶೀಲಿಸಿದಾಗ ಒಟ್ಟು 11 ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳಿದ್ದು , ಚೀಲಗಳಲ್ಲಿ ಇದ್ದ ಎಲ್ಲಾ ಪ್ಲಾಸ್ಟಿಕ್   ಸೊತ್ತುಗಳ ಒಟ್ಟು ಮೌಲ್ಯ 22,452/- ಆಗಿರುತ್ತದೆ ಎನ್ನಲಾಗಿದೆ.

ಚುನಾವಣೆಯ ಸಮಯವಾದುದರಿಂದ ಮೇಲಾಧಿಕಾರಿಯವರ ಆದೇಶದಂತೆ   ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ ಇದ್ದ ಪ್ಲಾಸ್ಟಿಕ್ ತೊಟ್ಟೆಗಳ ಪ್ಯಾಕೇಟನ್ನು ಪೊಲೀಸರು ಸ್ವಾದೀನಪಡಿಸಿಕೊಂಡಿರುತ್ತಾರೆ.

. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  

error: No Copying!