- ಬೈಂದೂರು: ದಿನಾಂಕ 27-03-2023 (ಹಾಯ್ ಉಡುಪಿ ನ್ಯೂಸ್) ಶಿರೂರು ಪರಿಸರದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಇಬ್ಬರು ಯುವಕರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
- ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ನಿರಂಜನ್ ಗೌಡ ಬಿ ಎಸ್ ಅವರು ದಿನಾಂಕ:21-03-2023 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಶಿರೂರು ಕರಾವಳಿ ಬಳಿ ಸಾರ್ವಜನಿಕ ಸ್ಥಳದಲ್ಲಿ ತೂರಾಡಿಕೊಂಡಿದ್ದ ನಾಗರಾಜ ಮೊಗವೀರ (23) ಎಂಬಾತನನ್ನು ಹಾಗೂ ಶಿರೂರು ಮಾರ್ಕೆಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ತೂರಾಡುತ್ತಿದ್ದ ವಿದ್ಯಾಧರ ಪೂಜಾರಿ (20) ಎಂಬ ಇಬ್ಬರನ್ನು ಬಂಧಿಸಿ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆಯ ಬಗ್ಗೆ ವೈದ್ಯಾಧಿಕಾರಿಗಳು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು ಪರೀಕ್ಷಿಸಿದ ವೈದ್ಯಾಧಿಕಾರಿಯವರು ನಾಗರಾಜ ಮೊಗವೀರ ಹಾಗೂ ವಿದ್ಯಾಧರ ಪೂಜಾರಿ ಇವರಿಬ್ಬರೂ ಗಾಂಜಾ ಸೇವಿಸಿರುವುದು ದೃಢ ಪಟ್ಟಿರುವುದಾಗಿ ವರದಿ ನೀಡಿದ್ದು. ಈ ಬಗ್ಗೆ ಅವರೀರ್ವರ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 27 (ಬಿ) ಎನ್.ಡಿ.ಪಿ.ಎಸ್. ಕಾಯ್ದೆ-1985 ರಂತೆ ಪ್ರಕರಣ ದಾಖಲಾಗಿರುತ್ತದೆ.