Spread the love

ಉಡುಪಿ: ದಿನಾಂಕ:24-03-2023(ಹಾಯ್ ಉಡುಪಿ ನ್ಯೂಸ್) ನಗರದ ಕೊಡಂಕೂರಿನಲ್ಲಿ ತಡ ರಾತ್ರಿ ಡಿಜೆ ಅಳವಡಿಸಿ ಸಾರ್ವಜನಿಕರಿಗೆ ಉಪದ್ರ ಮಾಡುತ್ತಿದ್ದ ವ್ಯಕ್ತಿಯ ಡಿಜೆ ಯನ್ನು ನಗರ ಠಾಣೆಯ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ನಗರ ಪೊಲೀಸ್ ಠಾಣೆಯ ಎಎಸ್ಐ ಯವರಾದ ಜಯಕರ. ಎ, ರವರು ದಿನಾಂಕ  22/03/2023 ರಂದು ಠಾಣಾ ಸರಹದ್ದಿನಲ್ಲಿ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿದ್ದು, ತಡ ರಾತ್ರಿ 00:15 ಗಂಟೆಗೆ ನಿಟ್ಟೂರು ಪರಿಸರದಲ್ಲಿ ಅತೀ ಕರ್ಕಶವಾದ ಡಿ.ಜೆ ಸೌಂಡ್‌ ಹಾಕಿ ಉಪದ್ರ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಮೇರೆಗೆ ಕೂಡಲೇ ಅಲ್ಲಿಗೆ ತೆರಳಿದಾಗ ಉಡುಪಿ ತಾಲೂಕು ಪುತ್ತೂರು ಗ್ರಾಮದ ಕೊಡಂಕೂರು ಪುತ್ರನ್‌ ಗ್ಯಾಸ್‌ ಗೋಡಾನ್‌ ಬಳಿ ರವಿರಾಜ್‌ (50) ವಾಸ: ಪುತ್ರನ್ ಗ್ಯಾಸ್ ಗೋಡೌನ್ ಬಳಿ ಕೊಡಂಕೂರು ಪುತ್ತೂರು ಗ್ರಾಮ ಉಡುಪಿ ಎಂಬಾತನ ಮನೆಯ ಅಂಗಳದಲ್ಲಿ ಶಾಮಿಯಾನ ಹಾಕಿ, ಯಾವುದೇ ಪರವಾನಿಗೆ ಅಥವಾ ಪೂರ್ವಾನುಮತಿ ಇಲ್ಲದೆ ಅತೀ ಕರ್ಕಶವಾದ ಡಿ.ಜೆ ಸೌಂಡ್ಸ್‌ ಹಾಕಿಕೊಂಡು ತಡ ರಾತ್ರಿ 00:30 ಗಂಟೆ ತನಕ ನೃತ್ಯ ಮಾಡುತ್ತಿದ್ದು, ಸೌಂಡ್ಸ್‌ ಮಿಕ್ಸರ್‌ ಹಾಗೂ 2 ಸೌಂಡ್‌ ಬಾಕ್ಸ್‌ ಗಳನ್ನು ಮುಂದಿನ ಕ್ರಮದ ಬಗ್ಗೆ ಪೊಲೀಸರು ಸ್ವಾಧೀನಪಡಿಸಿ ಕೊಂಡು ಕಾನೂನು ಕ್ರಮಕ್ಕಾಗಿ ಕಳುಹಿಸಿಕೊಟ್ಟಿರುತ್ತಾರೆ ರವಿರಾಜ್ ಎಂಬಾತನ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!