Spread the love

ಕಾರ್ಕಳ: ದಿನಾಂಕ : 18-03-2023( ಹಾಯ್ ಉಡುಪಿ ನ್ಯೂಸ್) ಕಾರ್ಕಳ ಪುರಸಭಾ ಸದಸ್ಯೆಯೋರ್ವರಿಗೆ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಮಾ ರಾಣೆ (42), ಪುರಸಭೆ ಸದಸ್ಯರು, ಕಾರ್ಕಳ ಇವರು ಕಾರ್ಕಳ ಪುರಸಭಾ ಸದಸ್ಯರಾಗಿದ್ದು ಕಾರ್ಕಳ ತಾಲೂಕು ಮಾರಿಗುಡಿಯ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಸ್ವಯಂ ಸೇವಕರಾಗಿದ್ದಾರೆನ್ನಲಾಗಿದೆ. ದಿನಾಂಕ 12/03/2023 ರಂದು ದೇವಸ್ಥಾನದ ಊಟದ ವಿಚಾರವಾಗಿ ವಾಟ್ಸಾಪ್‌ನಲ್ಲಿ ಬಂದ ಸಂದೇಶದ ಬಗ್ಗೆ ರಮಿತಾ , ಕಾರ್ಕಳ ಎಂಬವರು ಪ್ರತಿಮಾ ರಾಣೆಯವರನ್ನು ಉದ್ದೇಶಿಸಿ ಪುರಸಭಾ ಕಟ್ಟಡದ ಬಳಿ ಸಾರ್ವಜನಿಕರ ಸಮ್ಮುಖದಲ್ಲಿ  ಸಾರ್ವಜನಿಕವಾಗಿ ನಿಂದಿಸಿದ್ದು, ಇದೇ ವಿಚಾರವನ್ನು ವಾಟ್ಸಾಪ್ ಮೂಲಕ ಬಂದಿರುವ ಬಗ್ಗೆ ರಮಿತಾರವರು ಪ್ರತಿಮಾ ರಾಣೆಯವರಲ್ಲಿ ವಾಟ್ಸಾಪ್ ಸಂದೇಶವನ್ನು  ನೀವೇ ಕಳುಹಿಸಿ ಕೊಟ್ಟಿರುತ್ತೀರಾ ? ಎಂದು ರಮಿತಾಳು ಪುರಸಭಾ ರಸ್ತೆಯಲ್ಲಿ  ಪ್ರತಿಮಾ ರಾಣೆಯವರನ್ನು ಅಡ್ಡಕಟ್ಟಿ ನಿಲ್ಲಿಸಿ ಗಲಾಟೆ ಮಾಡಿ  ಬೆದರಿಕೆ ಹಾಕಿರುತ್ತಾರೆ ಎಂದು ಪ್ರತಿಮಾರವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!