Spread the love

ಮಣಿಪಾಲ: ದಿನಾಂಕ 3-03-2023 (ಹಾಯ್ ಉಡುಪಿ ನ್ಯೂಸ್) ಮಣಿಪಾಲದ ಮುಖ್ಯ ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದನ್ನು ಯಾರೋ ಕಳ್ಳತನ ನಡೆಸಿದ್ದಾರೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 26/02/2023 ರಂದು ಉಡುಪಿ ತಾಲ್ಲೂಕು ಶಿವಳ್ಳಿ ಗ್ರಾಮದ ಮಣಿಪಾಲದ ಶಿರಡಿಸಾಯಿ ಬಾಬಾ ಕ್ಯಾನ್ಸರ್‌ಆಸ್ಪತ್ರೆಯ ಎದುರು ರಸ್ತೆಯ ಬದಿಯಲ್ಲಿ ನಿಲ್ಲಿಸಿದ ದತ್ತಾತ್ರೇಯ ಪ್ರಭು (41) ವಾಸ: 4-7ಎ “ಶ್ರೀ ಹರಿ” ಕಾಜರಗುತ್ತಿ ಅಂಜಾರು ಗ್ರಾಮ ಮತ್ತು ಅಂಚೆ ಹಿರಿಯಡ್ಕ ಉಡುಪಿ ಎಂಬವರ KA-20 U-0218 ನೇ ಸ್ಪೆಂಡರ್‌ ಮೋಟಾರ್‌ ಸೈಕಲ್‌ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ  ಸ್ಪೆಂಡರ್‌ ಮೋಟಾರ್‌ ಸೈಕಲ್‌ನ ಅಂದಾಜು ಮೌಲ್ಯ 12,000/- ಆಗಬಹುದುದಾಗಿದೆ ಎಂದು ದತ್ತಾತ್ರೇಯ ಪ್ರಭು ರವರು ದೂರು ನೀಡಿದ್ದು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: No Copying!