Spread the love

ಉಡುಪಿ: ದಿನಾಂಕ 2-03-2023 ( ಹಾಯ್ ಉಡುಪಿ ನ್ಯೂಸ್) ಉಡುಪಿಯ ವ್ಯಕ್ತಿ ಯೋರ್ವ ರನ್ನು ಅಪರಿಚಿತ ನೋರ್ವ ಕರೆ ಮಾಡಿ ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ವಂಚಿಸಿದ ಬಗ್ಗೆ ದೂರು ದಾಖಲಾಗಿದೆ.

ಭಾಸ್ಕರ ಸೇರಿಗಾರ ಪ್ರಾಯ: 60 ವರ್ಷ ವಾಸ: ಮನೆ ನಂಬ್ರ 8-72 ಎ, ಮಾತಶ್ರೀ, ಗುಂಡಿಬೈಲು ಇವರು ಕೆನರಾ ಬ್ಯಾಂಕ್, ಮಣಿಪಾಲ ಶಾಖೆಯಲ್ಲಿ ಖಾತೆ ಹೊಂದಿದ್ದು, ದಿನಾಂಕ 01.03.2023 ರಂದು ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್ ನಂಬ್ರ 9707156864 ದಿಂದ ಭಾಸ್ಕರ್ ಸೇರಿಗಾರರಿಗೆ ಕರೆ ಮಾಡಿ, ತಾನು ಬ್ಯಾಂಕ್ ಅಧಿಕಾರಿ, ಈ ಕೂಡಲೇ ನಿಮ್ಮ ಬ್ಯಾಂಕ್ ಖಾತೆಯ ಕೆ.ವೈ.ಸಿ. ಅಪ್‌‌ಡೇಟ್ ಮಾಡಬೇಕು ಇಲ್ಲವಾದಲ್ಲಿ ಖಾತೆ ಬ್ಲಾಕ್ ಆಗುತ್ತದೆ ಎಂದು ಹೇಳಿ, ನಂಬಿಸಿ, ಭಾಸ್ಕರ್ ಸೇರಿಗಾರರಿಂದ ಆಧಾರ್ ವಿವರ, ಬ್ಯಾಂಕ್ ವಿವರ, ಎ.ಟಿ.ಎಂ. ವಿವರ ಹಾಗೂ ಓ.ಟಿ.ಪಿ. ವಿವರವನ್ನು ಪಡೆದು, ಅವರ ಖಾತೆಯಿಂದ ಕ್ರಮವಾಗಿ ರೂ. 99,000/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ, ಮೋಸದಿಂದ ಭಾಸ್ಕರ್ ಸೇರಿಗಾರರಿಗೆ ನಷ್ಟ ಉಂಟು ಮಾಡಿರುತ್ತಾರೆ ಎಂದು ಭಾಸ್ಕರ ಸೇರಿಗಾರ ಪೊಲೀಸರಿಗೆ ದೂರಿದ್ದಾರೆ . ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕಲಂ 66(C), 66(D), ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.  

error: No Copying!