ಬೈಂದೂರು: ದಿನಾಂಕ 24-02-2023(ಹಾಯ್ ಉಡುಪಿ ನ್ಯೂಸ್) ಶಿರೂರು ಗ್ರಾಮದ ಮಹಿಳೆಯೋರ್ವರಿಗೆ ಕುಮ್ಕಿ ಜಾಗದ ವಿಚಾರದಲ್ಲಿ ಮೂವರು ಮನೆಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಂದೂರು ತಾಲೂಕು ಶಿರೂರು ಗ್ರಾಮದ ಗೋಳಿಗುಂಡಿ ಎಂಬಲ್ಲಿನ ನಿವಾಸಿ ನೇತ್ರಾವತಿ (35) ರವರು ಶಿರೂರು ಗ್ರಾಮದಲ್ಲಿನ ಸರ್ವೆ ನಂಬ್ರ 72 ರಲ್ಲಿ 1.40 ಎಕ್ರೆ ಕುಮ್ಕಿ ಜಾಗವನ್ನು ಅನಾದಿ ಕಾಲದಿಂದಲೂ ಅನುಭವಿಸಿಕೊಂಡು ಬಂದಿರುತ್ತಾರೆ ಎಂದು ಕೊಂಡಿದ್ದು, ಸ್ಥಳೀಯರಾದ ಭರತ್ ಮೇಸ್ತ, ಕೌಶಿಕ್ ಮೇಸ್ತ ಮತ್ತು ಪಾಂಡುರಂಗ ಮೇಸ್ತ ಎಂಬವರು ನೇತ್ರಾವತಿಯವರ ಜಾಗಕ್ಕೆ ಪದೇ ಪದೇ ಅಕ್ರಮ ಪ್ರವೇಶ ಮಾಡಿ ಹೆದರಿಸುತ್ತಿದ್ದು , ದಿನಾಂಕ 23/02/2023 ರಂದು ಬೆಳಿಗ್ಗೆ 09:00 ಗಂಟೆಗೆ ನೇತ್ರಾವತಿಯವರು ಒಬ್ಬರೇ ಮನೆಯಲ್ಲಿರುವ ಸಮಯ ಪಾಂಡುರಂಗ ಮೇಸ್ತ ಮದ್ಯಪಾನ ಮಾಡಿಕೊಂಡು ಬಂದು ನೇತ್ರಾವತಿ ಯವರ ಮನೆಗೆ ಅಕ್ರಮ ಪ್ರವೇಶ ಮಾಡಿ, ನೇತ್ರಾವತಿ ಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಹೋಗಿದ್ದು ಅಲ್ಲದೇ ನಂತರ ಬಂದ ಕೌಶಿಕ್ ಮೇಸ್ತ ಕೂಡಾ ನೇತ್ರಾವತಿಯವರಿಗೆ ಜೀವ ಬೆದರಿಕೆ ಹಾಕಿರುತ್ತಾನೆ ಹಾಗೂ ಭರತ್ ಮೇಸ್ತ ಸಹ ಬೆದರಿಕೆ ಹಾಕಿರುವುದಾಗಿ ನೇತ್ರಾವತಿಯವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.