Spread the love

ಕುಂದಾಪುರ: ದಿನಾಂಕ 20/02/2023(ಹಾಯ್ ಉಡುಪಿ ನ್ಯೂಸ್) ತಲ್ಲೂರು ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ಏಳು ಜನರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ಪೊಲೀಸ್‌ ಠಾಣೆ , ಪೊಲೀಸ್ ಉಪ ನಿರೀಕ್ಷಕ (ತನಿಖೆ) ರಾದ ಪ್ರಸಾದ್ ಕುಮಾರ್ ಕೆ ಇವರು ದಿನಾಂಕ 19-02-2023ರಂದು ರೌಂಡ್ಸ್  ಕರ್ತವ್ಯದಲ್ಲಿರುವಾಗ  ಕುಂದಾಪುರ ತಾಲೂಕು ತಲ್ಲೂರು  ಗ್ರಾಮದ ವೈಭವ ಬಾರ್‌ ಬಳಿ ಇರುವ ನೀರಿನ ಟ್ಯಾಂಕ್ ಬಳಿ ಸಾರ್ವಜನಿಕ  ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆಂದು ಸಾರ್ವಜನಿಕ ರಿಂದ ಬಂದ ಮಾಹಿತಿಯಂತೆ ದಾಳಿ ಮಾಡಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ 1) ಪುಟ್ಟ  ಎಸ್ (42), ವಾಸ:ಧ್ವಜ ಕಟ್ಟೆ ಹತ್ತಿರ, ಪಿಂಗಾಣಿಗುಡ್ಡೆ, ತಲ್ಲೂರ್ ಗ್ರಾಮ, ಕುಂದಾಪುರ ತಾಲೂಕು, 2)ಸುದರ್ಶನ (31), ವಾಸ: ಸಹದೇವಿ ಹಾಲ್ ಹತ್ತಿರ, ಪಾರ್ತಿಕಟ್ಟೆ, ತಲ್ಲೂರ್ ಗ್ರಾಮ, ಕುಂದಾಪುರ ತಾಲೂಕು, 3)ಗಣೇಶ್ (49), ವಾಸ: ಧ್ವಜ ಕಟ್ಟೆ ಹತ್ತಿರ, ಪಿಂಗಾಣಿಗುಡ್ಡೆ, ತಲ್ಲೂರ್ ಗ್ರಾಮ, ಕುಂದಾಪುರ ತಾಲೂಕು, 4)ಮುಡೂರ (56), ವಾಸ:ಗರಡಿ ಮನೆ ಹತ್ತಿರ, ತಲ್ಲೂರ್ ಗ್ರಾಮ ಕುಂದಾಪುರ ತಾಲೂಕು, 5)ಸುರೇಶ್ (47),  ವಾಸ: ರಾಜಾಡಿ ರಸ್ತೆ, ದೇವಸ್ಥಾನದ ಹತ್ತಿರ, ಕೋಟೆಬಾಗಿಲು, ತಲ್ಲೂರ್ ಗ್ರಾಮ ಕುಂದಾಪುರ ತಾಲೂಕು, 6)ಸೀತಾರಾಮ(43), ವಾಸ: ಹಳೆ ರೈಸ್ ಮಿಲ್ ಹತ್ತಿರ, ಕೋಟೆಬಾಗಿಲು, ತಲ್ಲೂರ್ ಗ್ರಾಮ ಕುಂದಾಪುರ ತಾಲೂಕು., 7)ಸುನೀಲ್ (30), ವಾಸ: ಕೋಟೆಬಾಗಿಲು ಶಾಲೆ ಹತ್ತಿರ, ಕೋಟೆಬಾಗಿಲು, ತಲ್ಲೂರ್ ಗ್ರಾಮ ಕುಂದಾಪುರ ತಾಲೂಕು ಎಂಬ ಏಳು ಜನರನ್ನು ಬಂಧಿಸಿದ್ದು , ಇವರಿಂದ  ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ  1) ಹಳೆಯ ದಿನಪತ್ರಿಕೆ-1,  2) ಡೈಮಾನ್,ಆಟಿನ್,ಇಸ್ಪೀಟ್ ಕಳವಾರ್ ಚಿತ್ರಗಳಿರುವ 52 ಇಸ್ಪೀಟ್ ಎಲೆಗಳು 3) ನಗದು ರೂಪಾಯಿ 2420 /-  ರೂಪಾಯಿಯನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!