ಕುಂದಾಪುರ:19-02-2023 (ಹಾಯ್ ಉಡುಪಿ ನ್ಯೂಸ್) ಕಸಬಾ ಗ್ರಾಮದ ರಾಮ ಮಂದಿರ ದೇವಸ್ಥಾನದ ಬಳಿ ನಿಲ್ಲಿಸಿದ್ದ ಬೈಕ್ ಅನ್ನು ಯಾರೋ ಕಳ್ಳರು ಕದ್ದಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
ಪ್ರಕಾಶ್ ನಾಯ್ಕ ಎಂಬವರು ಬಜಾಜ್ ಪಲ್ಸರ್ 150ಸಿಸಿ ಕಂಪನಿಯ KA 20 Y 0058 ನೇ ಮೋಟಾರು ಸೈಕಲ್‌ನ ನೊಂದಣಿ ವಾಹನದ ಮಾಲೀಕರಾಗಿದ್ದು, ಮೋಟಾರು ಸೈಕಲನ್ನು ದಿನಾಂಕ 14/02/2023 ರಂದು ಕುಂದಾಪುರ ತಾಲೂಕು, ಕಸಬಾ ಗ್ರಾಮದ ರಾಮಮಂದಿರ ದೇವಸ್ಥಾನದ ಎದುರುಗಡೆ ಮದ್ಯಾಹ್ನ 12:30 ರ ಸುಮಾರಿಗೆ ತಮ್ಮ ಮೋಟಾರು ಸೈಕಲನ್ನು ನಿಲ್ಲಿಸಿ ದೇವಸ್ಥಾನದ ಒಳಗಡೆ ಹೋದವರು 12:40 ಗಂಟೆಗೆ ವಾಪಸ್ಸು ಬಂದು ಮೋಟಾರು ಸೈಕಲನ್ನು ನಿಲ್ಲಿಸಿದ ಸ್ಥಳದಲ್ಲಿ ನೋಡಿದಾಗ ವಾಹನವು ಸ್ಥಳದಲ್ಲಿ ಇರದೆ ಇದ್ದು ನಂತರದಲ್ಲಿ ಮೋಟಾರು ಸೈಕಲನ್ನು ನಿಲ್ಲಿಸಿದ ಸ್ಥಳದ ಸುತ್ತ ಮುತ್ತಲು ಮತ್ತು ಎಲ್ಲಾಕಡೆಯು ಹುಡುಕಾಡಿದರು ಪತ್ತೆಯಾಗಿರುವುದಿಲ್ಲ .ವಾಹನವನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿ ದ್ದಾರೆ ಎಂದು, ಅದರ ಮೌಲ್ಯ 25,000/- ರೂಪಾಯಿ ಆಗಬಹುದಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.