ಮಲ್ಪೆ: ದಿನಾಂಕ:15-02-2023(ಹಾಯ್ ಉಡುಪಿ ನ್ಯೂಸ್) ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗರಡಿ ಮಜಲಿನ ಹಾಡಿಯೊಂದರಲ್ಲಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಯುವಕನೋರ್ವನನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣೆ ,ಪೊಲೀಸ್ ಉಪ ನಿರೀಕ್ಷಕರಾದ ಗುರುನಾಥ ಬಿ ಹಾದಿಮನಿ ಅವರು ದಿನಾಂಕ 13-02-2023 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ತೆಂಕನಿಡಿಯೂರು ಗ್ರಾಮದ ಗರಡಿ ಮಜಲಿನಲ್ಲಿ ಇರುವ ಈಶ್ವರ ದೇವಸ್ಥಾನದ ಬಳಿ ಇರುವ ಸಾರ್ವಜನಿಕ ಹಾಡಿಯಲ್ಲಿ ಒಬ್ಬ ವ್ಯಕ್ತಿ ಅಮಲುಭರಿತನಾಗಿ ತೂಗಾಡುತ್ತಿರುವುದು ಕಂಡು ಬಂದಿದ್ದು ಪೊಲೀಸರು ಅವನ ಬಳಿ ಹೋಗಿ ಅವನ ಹೆಸರು ಕೇಳಿದಾಗ ಅವನು ತೊದಲುತ್ತಾ ತನ್ನ ಹೆಸರು ಯೋಗೀಶ (21) ಎಂದು ತಿಳಿಸಿದ್ದು. ಪೊಲೀಸರಿಗೆ ಅವನ ಬಾಯಿಯಿಂದ ಗಾಂಜಾದಂತಹ ವಾಸನೆ ಬರುತ್ತಿದ್ದು. ಆತನನ್ನು ವೈದ್ಯಕೀಯ ತಪಾಸಣೆ ಬಗ್ಗೆ ಪ್ರೊಫೆಸರ್ ಅಂಡ್ ಹೆಡ್ ಕೆಎಂಸಿ ಪೊರೆನ್ಸಿಕ್ ವಿಭಾಗದವರ ಮುಂದೆ ಹಾಜರು ಪಡಿಸಿದ್ದು, ಪರೀಕ್ಷಿಸಿದ ವೈದ್ಯರು ಯೋಗೀಶ (21) ಗಾಂಜಾ ಸೇವಿಸಿರುವ ಬಗ್ಗೆ ದಿನಾಂಕ 15/02/2023 ರಂದು ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 27(b) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.