ಕುಂದಾಪುರ: ದಿನಾಂಕ 12-02-2023(ಹಾಯ್ ಉಡುಪಿ ನ್ಯೂಸ್) ಬೀಜಾಡಿ ಗ್ರಾಮದ ಹಳೆ ಅಳಿವೆ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಪಾನ ಮಾಡುತ್ತಿದ್ದ ಯುವಕನನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಪೊಲೀಸ್ ಠಾಣೆ , ಪೊಲೀಸ್ ಉಪ ನಿರೀಕ್ಷಕರಾದ (ತನಿಖೆ) ಪ್ರಸಾದ್ ಕುಮಾರ್ ಕೆ ಅವರಿಗೆ ದಿನಾಂಕ 11-02-2023ರಂದು ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಹಳೆ ಅಳಿವೆ ಜಂಕ್ಷನ್ ಬಳಿ ಸಾರ್ವಜನಿಕ ಜಾಗದಲ್ಲಿ ಓರ್ವನು ಕುಳಿತುಕೊಂಡು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾನೆ ಎಂಬುದಾಗಿ ಸಾರ್ವಜನಿಕರಿಂದ ಬಂದ ಮಾಹಿತಿಯಂತೆ ಕೂಡಲೇ ಹಳೆ ಅಳಿವೆ ಜಂಕ್ಷನ್ನ ಸಾರ್ವಜನಿಕ ಜಾಗದ ಬಳಿ ತಲುಪಿದಾಗ ಅಲ್ಲಿ ಸುಮಂತ್ ಮೋಗವೀರ ಎಂಬಾತ ಕುಳಿತುಕೊಂಡು ಗ್ಲಾಸಿನಲ್ಲಿ ಮದ್ಯಪಾನವನ್ನು ಹಾಕಿಕೊಂಡು ಕುಡಿಯುತ್ತಿರುವುದು ಕಂಡು ಬಂದಿದ್ದು , ಪೊಲೀಸರು ಅವನ ಬಳಿ ಹೋದಾಗ ಅಲ್ಲಿ 180 ML ನ Old Tavern whisky ಟೆಟ್ರಾ ಪ್ಯಾಕೇಟ್-2, ಒಂದು ನೀರಿನ ಬಾಟಲ್ ಹಾಗೂ ಒಂದು ಪ್ಲಾಸ್ಟಿಕ್ ಗ್ಲಾಸ್‌ಇರುವುದು ಕಂಡುಬಂದಿರುತ್ತದೆ ಎನ್ನಲಾಗಿದೆ.ಆತನನ್ನು ವಶಕ್ಕೆ ಪಡೆದು ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.