Spread the love

ಮಣಿಪಾಲ: ದಿನಾಂಕ:11-02-2023(ಹಾಯ್ ಉಡುಪಿ ನ್ಯೂಸ್) ಮಣಿಪಾಲದ ಬಿಯರ್ ಬಾರ್ ಒಂದರಲ್ಲಿ ಮಾತಿಗೆ ಮಾತು ಬೆಳೆದು ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

76 ಬಡಗಬೆಟ್ಟು ಗ್ರಾಮ ಕಿನ್ನಿಮೂಲ್ಕಿ ಗೋವಿಂದ ಕಲ್ಯಾಣ ಮಂಟಪದ ಎದುರು, ಗೋಪಾಲ ನಿವಾಸದ ನಿವಾಸಿ ಗೋಪಾಲ.ಸಿ.ಶೆಟ್ಟಿ(29) ಇವರು ದಿನಾಂಕ 10/02/2023 ರಂದು ರಾತ್ರಿ ತನ್ನ ಸ್ನೇಹಿತ ಅಮಯ ಶೆಟ್ಟಿ ಅವರೊಂದಿಗೆ ಮಣಿಪಾಲದ ಡಿ ಟಿ ಬಾರ್ ಒಳಗಡೆ ಕೌಂಟರ್ ಬಳಿ ನಿಂತು ಮಾತನಾಡುತ್ತಿರುವಾಗ ಸಮಯ ಸುಮಾರು ರಾತ್ರಿ 11:30 ಗಂಟೆಗೆ ಇವರ ಪರಿಚಯದ ಗಣೇಶ್ ಡ್ರೈವಿಂಗ್ ಸ್ಕೂಲ್ ನ ಮಾಲಿಕ ಗಣೇಶ್ ರಾವ್ ಎಂಬವರು ಟೇಬಲ್ ನಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದವರು ಗೋಪಾಲ ಸಿ ಶೆಟ್ಟಿ ರವರನ್ನು ಕಂಡು ಅವಾಚ್ಯ ವಾಗಿ ಬೈದಿದ್ದು ಗೋಪಾಲ ಸಿ ಶೆಟ್ಟಿ ರವರು ಏನೂ ಮಾತನಾಡದೆ ಕೌಂಟರ್ ಬಳಿ ನಿಂತುಕೊಂಡು ಬಿಯರ್ ಕುಡಿಯುತ್ತಾ ನಿಂತಿದ್ದು ಸ್ವಲ್ಪ ಸಮಯದ ನಂತರ ಆರೋಪಿ ಗಣೇಶ್ ರಾವ್ ಕೈ ಯಲ್ಲಿ ಬಿಯರ್ ಮಗ್ಗ ನ್ನು ಹಿಡಿದುಕೊಂಡು ಕೊಲೆ ಮಾಡುವ ಉದ್ದೇಶದಿಂದ  ಗೋಪಾಲ ಸಿ ಶೆಟ್ಟಿ ರವರ ಬಳಿ ಬಂದು ಏಕಾಏಕಿ ಬಿಯರ್ ಮಗ್ ನಿಂದ ಗೋಪಾಲ ಸಿ ಶೆಟ್ಟಿ ರವರ ತಲೆಗೆ ಹೊಡೆದಿದ್ದು ಪರಿಣಾಮ ಗಣೇಶ್ ರಾವ್ ಕೈಯಲ್ಲಿದ್ದ ಬಿಯರ್ ಮಗ್  ಒಡೆದು ಹೋಗಿದ್ದು,  ಗಣೇಶ್ ರಾವ್ ತನ್ನ ಕೈಯಲ್ಲಿದ್ದ ಅರ್ಧ ಗ್ಲಾಸಿನ ಚೂರಿನಿಂದ ಪುನ: ಗೋಪಾಲ ಸಿ ಶೆಟ್ಟಿ ರವರ ಕುತ್ತಿಗೆಯ ಬಳಿ ಹೊಡೆದಿದ್ದು ಆಗ ಇವರು ಹಾಗೂ ಅವರ  ಸ್ನೇಹಿತ  ಅಮಯ ಶೆಟ್ಟಿ  ತಡೆಯಲು ಪ್ರಯತ್ನಿಸಿದ್ದು ಆಗ ಗಣೇಶ್ ರಾವ್ ಇವರನ್ನು ಉದ್ದೇಶಿಸಿ ಈಗ ಬಚಾವಾಗಿದ್ದಿ ಇನ್ನೊಮ್ಮೆ ಸರಿಯಾಗಿ ಸಿಕ್ಕು, ನಿನ್ನನ್ನು ಮುಗಿಸಿ ಬಿಡುತ್ತೇನೆ” ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಗೋಪಾಲ.ಸಿ.ಶೆಟ್ಟಿ ದೂರಿದ್ದಾರೆ.

ಈ ಹಲ್ಲೆಯಿಂದ  ಗೋಪಾಲ ಸಿ ಶೆಟ್ಟಿ ರವರಿಗೆ ತಲೆ ಹಾಗೂ ಕುತ್ತಿಗೆಯ ಬಳಿ ತೀವ್ರವಾಗಿ ಗಾಯ ಉಂಟಾಗಿ ರಕ್ತ ಬಂದಿರುತ್ತದೆ ಎಂದಿದ್ದಾರೆ,  ಹಾಗೂ ಹಲ್ಲೆಯನ್ನು ತಡೆಯಲು ಬಂದ ಅಮಯ ಶೆಟ್ಟಿ ಯವರ ಬಲ ಕೈಗೆ ಗ್ಲಾಸ್ ತಾಗಿ ಗಾಯ ಉಂಟಾಗಿರುತ್ತದೆ ಎನ್ನಲಾಗಿದೆ. ನಂತರ ಇಬ್ಬರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ,ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಈ ಬಗ್ಗೆ ಗಣೇಶ್ ರಾವ್ ರವರು ಗೋಪಾಲ.ಸಿ.ಶೆಟ್ಟಿ ತನಗೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿರುತ್ತಾನೆ ಎಂದು ಪ್ರತಿ ದೂರು ನೀಡಿದ್ದಾರೆ.

error: No Copying!