- ಮಣಿಪಾಲ: ದಿನಾಂಕ 11-02-2023(ಹಾಯ್ ಉಡುಪಿ ನ್ಯೂಸ್) ಪೆರಂಪಳ್ಳಿಯ ಸಾಯಿರಾಧಾ ಗ್ರೀನ್ ವ್ಯಾಲಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿದ್ದ ಇಬ್ಬರು ಯುವತಿಯಲನ್ನು ಮಣಿಪಾಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
- ದಿನಾಂಕ: 08.02.2023 ರಂದು ರಾತ್ರಿಯ ಸಮಯಕ್ಕೆ ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ರವರು ಸಿಬ್ಬಂದಿಗಳಾದ ಪಿಸಿ ,ಮಂಜುನಾಥ.ಪಿ ಸಿ , ಆನಂದಯ್ಯ ಮತ್ತು ಪಿ ಸಿ ,ಚನ್ನೇಶ .ಮಹಿಳಾ ಪಿಸಿ ಅರುಣಾ ಚಾಳೇಕರ್ ರವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ ಶಿವಳ್ಳಿ ಗ್ರಾಮದ ಪೆರಂಪಳ್ಳಿ ರಸ್ತೆಯ ಸಾಯಿರಾಧ ಗ್ರೀನ್ ವ್ಯಾಲಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ಯುವತಿ ಯರು ನಿಷೇದಿತ ಮಾದಕ ವಸ್ತು ಸೇವನೆ ಮಾಡಿದ ಅನುಮಾನದ ಮೇರೆಗೆ ಅವರೀರ್ವರನ್ನು ವಶಕ್ಕೆ ಪಡೆಯಲಾಗಿದ್ದು ಅವರನ್ನು ವಿಚಾರಣೆ ನಡೆಸಿದಾಗ ಅಂಜಲಿ ಎಸ್ ಮೆನನ್ , ಪ್ರಾಯ: 26 ವರ್ಷ, ಹಾಲಿ ವಾಸ: ಕೀರ್ತಿ ಸಾಮ್ರಾಟ್ ಅಪಾರ್ಟಮೆಂಟ್ ರೂಂ ನಂ.104 ವಿದ್ಯಾರತ್ನ ನಗರ ಮಣಿಪಾಲ, ಉಡುಪಿ ತಾಲೂಕು ಮತ್ತು ಜಿಲ್ಲೆ, ಖಾಯಂ ವಿಳಾಸ-ಉನ್ನಿಪರಾಂಬತ್ ಹೌಸ್.ಸರೋವರಂ, ತ್ರೀಶೂರ್ ಜಿಲ್ಲೆ, ಕೇರಳ ರಾಜ್ಯ. ಎಂಬುದಾಗಿ ತಿಳಿಸಿದ್ದು, ಇನ್ನೊಬ್ಬ ಯುವತಿ ಶ್ರತಿ ಬಂಗೇರ ಪ್ರಾಯ:24 ವರ್ಷ ಮಣಿಪಾಲ ರೆಸಿಡೆನ್ಸಿ,ರೂಂ.ನಂ:೩೧೦,ಅನಂತ ನಗರ , ಮಣಿಪಾಲ, ಉಡುಪಿ ಎಂಬಲ್ಲಿ ವಾಸವಾಗಿರುತ್ತಾಳೆ ಎಂದಿದ್ದಾಳೆ .ಈರ್ವರು ಯುವತಿ ಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಯಾವುದಾದರೂ ನಿಷೇದಿತ ಮಾದಕ ವಸ್ತುವನ್ನು ಸೇವಿಸಿದ್ದಾರೆಯೇ ? ಇಲ್ಲವೇ ಎಂದು ಪರೀಕ್ಷಿಸಲು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಪೊಲೀಸರು ಹಾಜರುಪಡಿಸಿರುತ್ತಾರೆ. ಅಂಜಲಿ ಎಸ್ ಮೆನನ್ , ಪ್ರಾಯ: 26 ವರ್ಷ ಹಾಗೂ ಶ್ರತಿ ಬಂಗೇರ ಪ್ರಾಯ 24 ವರ್ಷ ಇವರೀರ್ವರೂ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ದಿನಾಂಕ: 10.02-2023 ರಂದು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿದೆ.