ಉಡುಪಿ: ದಿನಾಂಕ 4-02-2023 ( ಹಾಯ್ ಉಡುಪಿ ನ್ಯೂಸ್) ಬ್ಯಾಂಕ್ ಅಧಿಕಾರಿ ಎಂದು ಮೊಬೈಲ್ ಗೆ ಕರೆ ಮಾಡಿ ನಂಬಿಸಿ ಆನ್ ಲೈನ್ ಮೂಲಕ ಬ್ಯಾಂಕ್ ಖಾತೆ ಯಿಂದ ಹಣ ಕದ್ದಿರುವ ಬಗ್ಗೆ ಮೋಸ ಹೋದ ನಿವ್ರತ್ತ ಬ್ಯಾಂಕ್ ಉದ್ಯೋಗಿ ಓರ್ವ ರು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಟ್ಯಾನ್ಲೀ .ಪಿ. ಕುಂದರ್ (79) ಎಂಬವರು ಎ.ಎಲ್.ಎನ್ ರಾವ್ ಲೇವೌಟ್, ಅಲೆವೂರು ರಸ್ತೆ, ಮಣಿಪಾಲದ ನಿವಾಸಿ ಯಾಗಿದ್ದು ಇವರು ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಉದ್ಯೋಗಿಯಾಗಿರುತ್ತಾರೆ. ಇವರು ಕೆನರಾ ಬ್ಯಾಂಕ್ , ಮಣಿಪಾಲ ಶಾಖೆಯಲ್ಲಿ ಎಸ್.ಬಿ ಖಾತೆ ಯನ್ನು ಹೊಂದಿರುತ್ತಾರೆ ಎನ್ನಲಾಗಿದೆ.
ಇವರು ದಿನಾಂಕ 02/01/2023 ರಂದು ಮಧ್ಯಾಹ್ನ ಈ ಹಿಂದೆ ತನ್ನ ಮೊಬೈಲ್ ನಲ್ಲಿ “Dear CANARA BANK Customer Your Account Has Been Blocked Due TO KYC within 24 Hrs Please Contact Customer care 8539021512 to continue your Services. ಎಂದು ನಮೂದಿಸಿ ದಿನಾಂಕ 03/11/2022 ರಂದು ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್ ನಿಂದ ಸಂದೇಶ ಕಳುಹಿಸಿರುವುದನ್ನು ನೋಡಿ ಕೆನರಾ ಬ್ಯಾಂಕ್ ಕಸ್ಟಮರ್ ಕೇರ್ ಎಂದು ನಂಬಿಕೊಂಡು ಕರೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಯಾರೋ ಅಪರಿಚಿತ ವ್ಯಕ್ತಿಗಳು ದಿನಾಂಕ 02/02/2023 ರಂದು ಸ್ಟಾನ್ಲೀ ಅವರಿಗೆ ಕರೆ ಮಾಡಿ ಅವರ ಬ್ಯಾಂಕ್ ಖಾತೆಯ ವಿವರ ಹಾಗೂ ಓಟಿಪಿ ಪಡೆದು ಅವರ ಎಸ್.ಬಿ ಖಾತೆಯಿಂದ ರೂಪಾಯಿ. 50,000/-, 14,330.40/-, 14,165.20/-, 14,165.20/-, 14,165.20/-, ರಂತೆ 4 ಬಾರಿ ಟ್ರಾನ್ಸೆಕ್ಷನ್ ಮಾಡಿ ಒಟ್ಟು ರೂ.1,06,826/- ಹಣವನ್ನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ, ಸ್ಟ್ಯಾನ್ಲೀ .ಪಿ. ಕುಂದರ್ ಇವರಿಗೆ ನಷ್ಟ ಉಂಟು ಮಾಡಿದ್ದಾರೆ ಎಂದು ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ 66(C), 66(D)ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.