ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ಸರಕಾರದ ಮೊದಲ ಆದ್ಯತೆಯಾಗಿರಬೇಕಾಗಿತ್ತು. ಆದರೇನು ಮಾಡಲಿ, ಎತ್ತರದ ಮೂರ್ತಿ, ಮನೋರಂಜನೆ ಮತ್ತು ಮಠ – ಮಂದಿರಗಳು ಸರಕಾರದ ಆದ್ಯತೆಯ ಕ್ಷೇತ್ರಗಳಾಗಿವೆ. ಹಾಗಾಗಿ ಸಾರ್ವಜನಿಕರ ತೆರಿಗೆ ಹಣವನ್ನು ಯಾವೆಲ್ಲಾ ಆದ್ಯತೆಯ ಕ್ಷೇತ್ರಗಳಿಗೆ ವಿನಿಯೋಗ ಮಾಡಬೇಕೋ ಅಲ್ಲಿಗೆ ಮಾಡದೆ, ತಮ್ಮ ಮೂಗಿನ ನೇರಕ್ಕೆ ತಮಗೆ ಹೆಚ್ಚು ಪ್ರಚಾರ ಸಿಗುವ ಮತ್ತು ಹೆಚ್ಚು ಕಮಿಷನ್ ಸಿಗುವ ಕಡೆಗೆ ಲಕ್ಷಾಂತರ, ಕೊಟ್ಯಂತರ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಮೌನಿಗಳಾದಾಗ ಪ್ರಭುತ್ವ ಪ್ರಜೆಗಳಿಂದ ಸಹಜವಾಗಿ ದೂರವಾಗುತ್ತದೆ. ನಮ್ಮ ದೇಶದಲ್ಲಿ ಆಗುತ್ತಿರುವುದು ಇದುವೇ.
~ ಶ್ರೀರಾಮ ದಿವಾಣ
03/02/2023