Spread the love

ಮಣಿಪಾಲ: ದಿನಾಂಕ 3-02-2023(ಹಾಯ್ ಉಡುಪಿ ನ್ಯೂಸ್) ಮಣಿಪಾಲದ ಅಪಾರ್ಟ್ ಮೆಂಟ್ ಒಂದರಲ್ಲಿ ಕಳ್ಳತನ ನಡೆದಿರುವ ಬಗ್ಗೆ ದೂರು ದಾಖಲಾಗಿದೆ.

ಮಣಿಪಾಲದ ವಿದ್ಯಾರತ್ನ ನಗರದಲ್ಲಿರುವ ಕೀರ್ತಿ ಸಾಮ್ರಾಟ್ ಅಪಾರ್ಟ್ ಮೆಂಟ್ ನ 2ನೇ ಮಹಡಿ ರೂಮ್ ನಂಬರ್ 201 ರ ನಿವಾಸಿ ಪ್ರವೀಣ್ ಕುಮಾರ್ (21) ರವರ ರೂಂ ನಂಬರ್ 201 ಮತ್ತು 101ರಲ್ಲಿ ದಿನಾಂಕ 28/01/2023 ರಂದು ಬೆಳಿಗ್ಗೆ 07:30 ಗಂಟೆಯಿಂದ ಬೆಳಿಗ್ಗೆ  09:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪ್ರವೇಶಿಸಿ ಎರಡು ರೂಮ್‌ಗಳಲ್ಲಿದ್ದ ಲ್ಯಾಪ್ ಟಾಪ್‌, ಕೆನಾನ್‌ ಕಂಪನಿಯ ಕ್ಯಾಮರಾ, ಸ್ಮಾರ್ಟ್ ವಾಚ್‌, ಪವರ್‌ ಬ್ಯಾಂಕ್‌  ಪರ್ಸ್‌ ಮತ್ತು 3 ಮೊಬೈಲ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದು ಕಳವಾದ  ಸೊತ್ತುಗಳ ಒಟ್ಟು  ಮೌಲ್ಯ 3,23,500/- ಆಗಿರುವುದಾಗಿ  ಪ್ರವೀಣ್‌ ಕುಮಾರ್(21) ವಾಸ:  ರೂಮ್‌ ನಂ 201 ಕೀರ್ತಿ ಸಾಮ್ರಾಟ್‌ ಅಪಾರ್ಟ್ ಮೆಂಟ್‌ ಮಣಿಪಾಲ ಇವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!