Spread the love
  • ಉಡುಪಿ: ದಿನಾಂಕ 28-01-2023 (ಹಾಯ್ ಉಡುಪಿ ನ್ಯೂಸ್) ಉಡುಪಿಯ ವ್ಯಕ್ತಿ ಯೋರ್ವರಿಗೆ ಎಲೆಕ್ಟ್ರಾನಿಕ್ಸ್ ಸಾಮಾಗ್ರಿ ಗಿಫ್ಟ್ ಬಂದಿದೆ ಎಂದು ವ್ಯಕ್ತಿ ಯೋರ್ವ ನಂಬಿಸಿ ತನ್ನ ಖಾತೆಗೆ ಹಣ ವರ್ಗಾವಣೆ ಮಾಡಿ ಕೊಂಡು ಗಿಫ್ಟ್ ನೀಡದೆ ವಂಚನೆ ನಡೆಸಿರುವ ಬಗ್ಗೆ ಪೊಲೀಸರಿಗೆ ದೂರಲಾಗಿದೆ.
  • ಸದೀಚ್ಚಾ ಪರೇಶ್‌ ಕಾಮತ್ ಎಂಬವರಿಗೆ ಯಾರೋ ಅಪರಿಚಿತರು ಕರೆ ಮಾಡಿ ಎಲೆಕ್ಟ್ರಾನಿಕ್ಸ್ ಸಾಮಾಗ್ರಿ ನಿಮಗೆ ಗಿಫ್ಟ್ ಬಂದಿದೆ ಎಂದು ತಿಳಿಸಿದ್ದು ಗಿಫ್ಟ್ ನ್ನು ಪರೇಶ್ ಕಾಮತ್ ಗೆ ಕಳುಹಿಸಲು ಅಪರಿಚಿತ ನೀಡಿದ ಬ್ಯಾಂಕ್‌ ಖಾತೆಗೆ ಹಣ ವರ್ಗಾಯಿಸಲು ತಿಳಿಸಿದಂತೆ ಪರೇಶ್ ಕಾಮತ್ ರು ಕ್ರಮವಾಗಿ ರೂ.10/-, ರೂ.4990/-, ರೂ.5000/-, ರೂ.11,999/-, ರೂ.11,990/- ಹಣವನ್ನು ಹಂತ ಹಂತವಾಗಿ ಒಟ್ಟು ರೂ 33,998/- ಪಾವತಿಸಿದ್ದು, ಪರೇಶ್ ಕಾಮತ್ ರಿಗೆ ಎಲೆಕ್ಟ್ರಾನಿಕ್ಸ್ ಗಿಫ್ಟ್ ನ್ನು ನೀಡದೇ , ಹಣವನ್ನೂ ವಾಪಾಸು ನೀಡದೇ ಪರೇಶ್ ಕಾಮತ್ ರಿಗೆ ನಷ್ಟ ಉಂಟು ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: No Copying!