- ಮಲ್ಪೆ: ದಿನಾಂಕ: 21-01-2023 (ಹಾಯ್ ಉಡುಪಿ ನ್ಯೂಸ್) ಮಲ್ಪೆ ಠಾಣಾ ವ್ಯಾಪ್ತಿಯ ಮೂಡುಬೆಟ್ಟುವಿನಲ್ಲಿ ಕಳ್ಳತನ ವಾಗಿರುವ ಬಗ್ಗೆ ದೂರು ದಾಖಲಾಗಿದೆ.
- ಕಾರ್ಕಳ ,ಬೆಳ್ವಾಯಿ, ತಾಹೀರ್ ನಗರ ನಿವಾಸಿ ಶೇಖ್ ನಜೀರ್ ಅಹಮ್ಮದ್ ಇವರು ದಿನಾಂಕ 17/01/2023 ರಂದು ಹೆಂಡತಿಯೊಂದಿಗೆ ಕೊಡವೂರು ಮೂಡುಬೆಟ್ಟು ಮುಖ್ಯಪ್ರಾಣ ರಸ್ತೆಯಲ್ಲಿ ಇರುವ ತನ್ನ ಬಾಡಿಗೆ ಮನೆಗೆ ಬೀಗ ಹಾಕಿ ತನ್ನ ಊರಾದ ಬೆಳುವಾಯಿಗೆ ಹೋಗಿದ್ದು, ದಿನಾಂಕ 20/01/2023 ರಂದು ಬೆಳಿಗ್ಗೆ 7:00ಘಂಟೆಗೆ ನಜೀರ್ ಅಹಮ್ಮದ್ ರ ಬಾಡಿಗೆ ಮನೆಯ ಪಕ್ಕದ ನಿವಾಸಿ ಮೊಂತಿ ಡಿಕಾಸ್ತ ರವರು ನಜೀರ್ ಅಹಮ್ಮದ್ ರ ಹೆಂಡತಿ ರೆಹನಾ ರವರಿಗೆ ಪೋನ್ ಕರೆ ಮಾಡಿ ಮೂಡುಬೆಟ್ಟು ಮುಖ್ಯ ಪ್ರಾಣ ರಸ್ತೆಯಲ್ಲಿ ಇರುವ ಅವರ ಬಾಡಿಗೆ ಮನೆಯಲ್ಲಿ ಕಳ್ಳತನ ಆಗಿರುವ ಬಗ್ಗೆ ಮಾಹಿತಿ ನೀಡಿದಂತೆ ನಜೀರ್ ಅಹಮ್ಮದ್ ರ ವರು ಬೆಳುವಾಯಿಯಿಂದ ಹೊರಟು ಬೆಳಿಗ್ಗೆ 8:30 ಗಂಟೆಗೆ ಕೊಡವೂರು ಮೂಡುಬೆಟ್ಟು ಮುಖ್ಯ ಪ್ರಾಣ ರಸ್ತೆಯಲ್ಲಿ ಇರುವ ಬಾಡಿಗೆ ಮನೆಗೆ ಬಂದು ನೋಡಿದಾಗ ಮನೆಯ ಮುಖ್ಯ ಬಾಗಿಲಿನ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮುರಿದು ಮನೆಯ ಒಳಗೆ ಪ್ರವೇಶಿಸಿ ಮನೆಯ ಬೆಡ್ ರೂಮಿನಲ್ಲಿ ಇದ್ದ 3 ಗೋದ್ರೇಜ್ ಕಪಾಟಿನ ಬೀಗ ಮುರಿದು ಬಟ್ಟೆ ಬರೆಗಳನ್ನು ಎಳೆದು ನೆಲದಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡಿ ಬೆಡ್ ರೂಮಿನ ಗೋದ್ರೇಜ್ ಕಪಾಟಿನ ಲಾಕರ್ ನಲ್ಲಿ ಡಬ್ಬದಲ್ಲಿ ಇರಿಸಿದ್ದ 2 ಚಿನ್ನದ ಬಳೆಗಳು 30 ಗ್ರಾಂ, 3 ಚಿನ್ನದ ಉಂಗುರಗಳು 10 ಗ್ರಾಂ,ಉಂಗುರ ಸಹಿತ ಬ್ರಾಸ್ ಲೇಟ್ ತೂಕ 8 ಗ್ರಾಂ ಒಟ್ಟು 48 ಗ್ರಾಂ ತೂಕದ ಚಿನ್ನಾಭರಣ ಮೌಲ್ಯ ರೂಪಾಯಿ 2,00,000/- ಹಾಗೂ ಲಾಕರ್ ನಲ್ಲಿ ಇದ್ದ 2 ರಾಡೋ ಕಂಪೆನಿಯ ವಾಚ್ ಮೌಲ್ಯ ರೂಪಾಯಿ 10,000/ , ಸಿ.ಕೆ ಕಂಪೆನಿಯ ವಾಚ್ ಮೌಲ್ಯ ರೂಪಾಯಿ 12,000/-, ಹೈನೋಟಿಕ್ ಕಂಪೆನಿಯ ವಾಚ್ ಮೌಲ್ಯ ರೂಪಾಯಿ 3,000 ಒಟ್ಟು 2,25,000/- ಮೌಲ್ಯದ ಚಿನ್ನಾಭರಣ ಹಾಗೂ ಸೊತ್ತನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.