ಉಡುಪಿ: ದಿನಾಂಕ 12-01-2023(ಹಾಯ್ ಉಡುಪಿ ನ್ಯೂಸ್) ನಗರದ ಬನ್ನಂಜೆಯಲ್ಲಿ ವ್ಯಕ್ತಿ ಯೋರ್ವರು ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕೆ. ಜಯಪ್ರಕಾಶ್ ಎಂಬವರು ತನ್ನ ಹೋಂಡಾ ಯೂನಿಕಾರ್ನ್ ಮೋಟಾರ್ ಸೈಕಲ್ ನಂಬ್ರ KA20EH6316 (Chassis No: ME4KC09CME8860974 & Engine No: KC09EE8687110) ವನ್ನು ದಿನಾಂಕ 23/12/2022 ರಂದು 10:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಬನ್ನಂಜೆ ಎಂಬಲ್ಲಿ ತನ್ನ ಮನೆಯ ಎದುರು ನಿಲ್ಲಿಸಿದ್ದು, ಮರುದಿನ ದಿನಾಂಕ 24/12/2022 ರಂದು ಬೆಳಿಗ್ಗೆ 06:30 ಗಂಟೆಗೆ ನೋಡುವಾಗ ಮೋಟಾರ್ ಸೈಕಲ್ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಮೋಟಾರ್ ಸೈಕಲನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಮೋಟಾರ್ ಸೈಕಲ್ ನ ಅಂದಾಜು ಮೌಲ್ಯ ರೂ. 40,000/- ಆಗಬಹುದು ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.